ರಂಗೂನ್ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ಕಂಗನಾ

ಬುಧವಾರ, 2 ಸೆಪ್ಟಂಬರ್ 2015 (10:48 IST)
ಕಟ್ಟಿ ಬಟ್ಟಿ ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಕಂಗನಾ ಇದರ ನಡುವೆ ರಂಗೂನ್ ಸಿನಿಮಾದಲ್ಲೂ ತೊಡಗಿಸಿದ್ದಾರೆ. ಸಿನಿಮಾದಲ್ಲಿ ಕಂಗನಾ ಜೊತೆಗೆ ಶಾಹೀದ್ ಕಪೂರ್ ಹಾಗೂ ಸೈಫ್ ಆಲಿಖಾನ್  ಕೂಡ ಕಾಣಿಸಿಕೊಂಡಿದ್ದಾರೆ.
ವಿಶಾಲ್ ಭಾರದ್ವಾಜ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಮುಖವಾಗಿ ಮೂರು ಪಾತ್ರಗಳಿವೆ. ಸೂಪರ್ ಸ್ಟಾರ್ , ಮೆಂಟರ್ ಹಾಗೂ ಸೈನಿಕ ಈ ಮೂರು ವಿಭಿನ್ನ ಪಾತ್ರಗಳ ಮೇಲೆ ಸಿನಿಮಾ ನಿರ್ಮಾಣವಾಗುತ್ತಿದೆ. ಆದ್ರೆ ಈ ಎಲ್ಲಾ ಪಾತ್ರಗಳ ನಡುವೆಯೇ ಕಂಗನಾ ನಟಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
 
ಇನ್ನು ಸದ್ಯ ಕಂಗನಾ ಕೈಯಲ್ಲಿ ಕೈ ತುಂಬಾ ಆಫರ್ ಗಳಿವೆ. ಇದೇ ತಿಂಗಳ 18ರಂದು ಕಟ್ಚಿಬಟ್ಟಿ ಸಿನಿಮಾ ರಿಲೀಸ್ ಆಗಲಿದೆ. ಒಂದು ಕಡೆ ಸಿನಿಮಾ ರಿಲೀಸ್ ಆಗೋ ಖುಷಿ ಆದ್ರೆ ಇನ್ನೊಂದು ಕಡೆ ಕೈಯಲ್ಲಿ ಸಾಕಷ್ಟು ಆಫರ್ ಗಳಿರೋದ್ರಿಂದ ಕಂಗನಾ ಫುಲ್ ಖುಷ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ