ರಾಣಿ ಲಕ್ಷ್ಮೀಬಾಯಿಯಾಗುತ್ತಿದ್ದಾಳೆ ಕಂಗನಾ ರನೌತ್

ಬುಧವಾರ, 1 ಜುಲೈ 2015 (10:54 IST)
ಸದ್ಯ ತನು ವೆಡ್ಸ್ ಮನು ರಿರ್ಟನ್ಸ್ ಸಿನಿಮಾದ ಯಶಸ್ವಿ ಅಲೆಯಲ್ಲಿ ತೇಲುತ್ತಿರುವ ಕಂಗನಾ ಇದೀಗ ಮತ್ತೊಂದು ಮೆಗಾ ಮೂವಿಗಾಗಿ ಸಜ್ಜಾಗುತ್ತಿದ್ದಾಳೆ. ನಿರ್ದೇಶಕ ಕೆತನ್ ಮೆಹ್ತಾ ಅವರ ರಾಣಿ ಲಕ್ಷ್ಮೀಬಾಯಿ ಸಿನಿಮಾದಲ್ಲಿ ಕಂಗನಾ ರಾಣಿ ಲಕ್ಷ್ಮೀಬಾಯಿ ಆಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಇನ್ನು ಕಂಗನಾ ತಮ್ಮ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಕೇತನ್ ಅವರೇ ಬಹಿರಂಗ ಪಡಿಸಿದ್ದಾರೆ.
ಇನ್ನು ಈಗಗಾಲೇ ಸಿನಿಮಾದ ಸ್ಕ್ರಿಫ್ಟ್ ಬಗ್ಗೆ ಕಂಗನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾಳಂತೆ. ಈ ಪಾತ್ರ ಕಂಗನಾ ವೃತ್ತಿ ಬದುಕಿನಲ್ಲಿ ಹೊಸ ತರಹವಾದ ಪಾತ್ರವಾಗಿದೆ ಎಂದಿದ್ದಾರೆ ಕೇತನ್. ಅಲ್ಲದೇ ಕಂಗನಾ ಕೂಡ ಈ ಪಾತ್ರವನ್ನು ಅಷ್ಟೇ ಚೆನ್ನಾಗಿ ನಿಭಾಯಿಸುತ್ತಾರೆ ಅನ್ನೋ ನಂಬಿಕೆ ನನಗಿದೆ ಅಂತಾ ಕೇತನ್ ಹೇಳಿದ್ದಾರೆ. ಇನ್ನು ಸಿನಿಮಾಕ್ಕಾಗಿ ಕಂಗನಾ ಈಗಾಗಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದು, ಕುದುರೆ ಸವಾರಿಗಾಗಿ ತರಬೇತಿ ಪಡೆಯುತ್ತಿದ್ದಾಳೆ.
 
ಈ ಹಿಂದೆಯೂ ಕೇತನ್ ಐತಿಹಾಸಿಕ ಸಿನಿಮಾವೊಂದನ್ನು ಮಾಡಿದ್ದರು. 2005ರಲ್ಲಿ ಆಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಮಂಗಲ್ ಪಾಂಡೆ ಸಿನಿಮಾವನನ್ನು ಕೇತನ್ ಅವರೇ ನಿರ್ದೇಶಿಸಿದ್ದರು. ಆದ್ರೀಗ ಮತ್ತೆ ಐತಿಹಾಸಿಕ ಸಿನಿಮಾವೊಂದಕ್ಕೆ ಕೇತನ್ ರೆಡಿಯಾಗುತ್ತಿದ್ದು ಅದು ಯಾವ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇನ್ನು ಕಂಗನಾ ಅಭಿಮಾನಿಗಳಂತು ಸಿನಿಮಾಕ್ಕೆ ಕಾದು ಕುಳಿತಿದ್ದಾರೆ.

ವೆಬ್ದುನಿಯಾವನ್ನು ಓದಿ