Kishore Kumar: ಸಿಎಂ ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಎಂದಿದ್ದು ನನಗೆ ಇಷ್ಟವಾಯ್ತು ಎಂದ ನಟ ಕಿಶೋರ್
ಬೆಂಗಳೂರು ಚಿತ್ರೋತ್ಸವದಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದಾರೆ. ಈ ಬಾರಿಯ ಚಲನಚಿತ್ರೋತ್ಸವದ ರಾಯಭಾರಿಯಾಗಿರುವ ಅವರು ವೇದಿಕೆಯಲ್ಲಿ ಮಾತನಾಡುವಾಗ ನನಗೆ ಸಿದ್ದರಾಮಯ್ಯ ಯಾಕಿಷ್ಟ ಎಂದು ಹೇಳಿದ್ದಾರೆ.
ಮಾಂಸ ತಿಂದು ದೇಗುಲಕ್ಕೆ ಹೋಗ್ತೀನಿ ಎಂದ ಸಿದ್ದರಾಮಯ್ಯ ಮಾತು ನನಗೆ ಬಹಳ ಇಷ್ಟವಾಯ್ತು. ಅವರ ರೀತಿ ವ್ಯಕ್ತಿತ್ವ ಇರೋದು ಬಹಳ ಮುಖ್ಯ. ಮಾಂಸ ತಿಂದು ಹೋದರೆ ತಪ್ಪೇನು? ಆಹಾರ ಅವರ ಆಯ್ಕೆ.ಬೇಡ ಕುಲದ ದೀನ ಶಿವನಿಗೆ ಮಾಂಸವನ್ನೇ ನೈವೇದ್ಯವಾಗಿ ಅರ್ಪಿಸುತ್ತಾರೆ. ಬೇಡರ ಕಣ್ಣಪ್ಪ ಸಿನಿಮಾದ ಆತ್ಮವೇ ಈ ಎಳೆ ಎಂದು ಕಿಶೋರ್ ಹೇಳಿದ್ದಾರೆ.
ಅವರ ಈ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಕೆಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯನವರನ್ನು ಈ ರೀತಿ ಹಾಡಿ ಹೊಗಳಿದ್ದಕ್ಕೇ ನಿಮಗೆ ರಾಯಭಾರಿ ಸ್ಥಾನ ಸಿಕ್ಕಿದೆಯಾ ಎಂದು ವ್ಯಂಗ್ಯ ಮಾಡಿದ್ದಾರೆ.