ವಂಚನೆ ಪ್ರಕರಣದಲ್ಲಿ ಕನ್ನಡ ಚಿತ್ರನಟಿ ಮರಿಯಾ ಸುಸೈರಾಜ್ ಬಂಧನ

ಗುರುವಾರ, 8 ಅಕ್ಟೋಬರ್ 2015 (18:25 IST)
ಕನ್ನಡ ಚಿತ್ರನಟಿ ಮತ್ತು ರೂಪದರ್ಶಿ ಮರಿಯಾ ಸುಸೈರಾಜ್ ಅವರನ್ನು ವಂಚನೆ ಆರೋಪದ ಮೇಲೆ ಗುಜರಾತ್ ಪೊಲೀಸರು ಬಂಧಿಸಿದ್ದಾರೆ.  ಮರಿಯಾ ತನ್ನ ಟ್ರಾವೆಲ್ ಏಜನ್ಸಿಯ ಮೂಲಕ ಹಜ್ ಯಾತ್ರಾರ್ಥಿಗಳಿಗೆ 2.62 ಕೋಟಿ ರೂ. ವಂಚಿಸಿದ್ದಾಳೆಂದು ಪತ್ರಿಕೆಯೊಂದರ ವರದಿಯಲ್ಲಿ ತಿಳಿಸಲಾಗಿದೆ.  ವಡೋದರಾದಲ್ಲಿ ಅವರ ಟ್ರಾವಲ್ ಏಜನ್ಸಿಯಿದ್ದು, ಅನೇಕ ಹಜ್ ಯಾತ್ರಿಗಳಿಗೆ ಟಿಕೆಟ್ ಬುಕ್ ಮಾಡುತ್ತದೆ.
 
ಬುಕಿಂಗ್ ಬಳಿಕ ಎಲ್ಲಾ ಟಿಕೆಟ್‌ಗಳನ್ನು ರದ್ದುಮಾಡಿ ಸಂಗ್ರಹಿಸಲಾದ 2.68 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.  ಇದಕ್ಕೆ ಮುಂಚೆ ಮರಿಯಾ ಸುಸೈರಾಜ್  2008ರಲ್ಲಿ ಟಿವಿ ನಿರ್ಮಾಪಕ ನೀರಜ್ ಗ್ರೋವರ್ ಹತ್ಯೆ ಪ್ರಕರಣದಲ್ಲಿ 3 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದರು.

 ನೀರಜ್ ಗ್ರೋವರ್ ಹತ್ಯೆ ಆರೋಪದ ಮೇಲೆ ಅವರನ್ನು ಜೈಲಿಗೆ ಕಳಿಸಿರಲಿಲ್ಲ. ಆದರೆ ಸಾಕ್ಷ್ಯಾಧಾರ ನಾಶ ಮಾಡಿದ ಆರೋಪದ ಮೇಲೆ ಜೈಲಿಗೆ ಕಳಿಸಲಾಗಿತ್ತು. 
 

ವೆಬ್ದುನಿಯಾವನ್ನು ಓದಿ