ಹಿರಿಯ ಪೋಷಕ ನಟ ವೇಣುಗೋಪಾಲ್ ಇನ್ನಿಲ್ಲ
ಬೆಂಗಳೂರು: ಕನ್ನಡದ ಹಲವು ಚಿತ್ರಗಳಲ್ಲಿ ಪೋಷಕ ನಟ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶರಾಗಿದ್ದಾರೆ.
ಕೇವಲ ಚಲನಚಿತ್ರಗಳು ಮಾತ್ರವಲ್ಲದೆ ಮನೆತನ, ಜನನಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ನಾಳೆ ವೇಣುಗೋಪಾಲ್ ಅಂತ್ಯಕ್ರಿಯೆ ನಡೆಯಲಿದೆ. ವೇಣುಗೋಪಾಲ್ ಅವರಿಗೆ ಪವನ್ ಮತ್ತು ಹೇಮಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.