ಬೆಂಗಳೂರು: ಒಂದು ಕಾಲವಿತ್ತು. ಬೇರೆ ಭಾಷೆಗಳ ಸಿನಿಮಾಗಳನ್ನು ಕನ್ನಡದಲ್ಲಿ ಪೈಪೋಟಿಗೆ ಬಿದ್ದು ರಿಮೇಕ್ ಮಾಡಲಾಗುತ್ತಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಕನ್ನಡ ಸಿನಿಮಾಗಳು ಈಗ ಬೇರೆ ಭಾಷೆಯವರ ಗಮನ ಸೆಳೆಯುತ್ತಿದೆ.
ಕಳೆದ ವರ್ಷ ಬಿಡುಗಡೆಯಾಗಿದ್ದ ಕೆಜಿಎಫ್ ನಂತಹ ಅದ್ಧೂರಿ ಸಿನಿಮಾಗಳಿಂದ ಹಿಡಿದು, ಇತ್ತೀಚೆಗಷ್ಟೇ ಬಿಡುಗಡೆಯಾದ ಹೊಸಬರ ‘ದಿಯಾ’, ‘ಲವ್ ಮಾಕ್ ಟೈಲ್’ ನಂತಹ ಸಿನಿಮಾಗಳು ತೆಲುಗು, ಹಿಂದಿ ಸಿನಿಮಾ ರಂಗದ ಗಮನ ಸೆಳೆಯುತ್ತಿದೆ.
ಲಾಕ್ ಡೌನ್ ಮುಗಿದ ಮೇಲೆ ಹಲವು ಕನ್ನಡ ಸಿನಿಮಾಗಳು ತೆಲುಗು, ತಮಿಳು, ಹಿಂದಿಯಲ್ಲಿ ರಿಮೇಕ್ ಆಗುವ ಸುದ್ದಿ ಬರುವುದರಲ್ಲಿ ಸಂಶಯವಿಲ್ಲ. ಇತ್ತೀಚೆಗೆ ಸ್ಟಾರ್ ಗಿರಿಗಿಂತಲೂ ಉತ್ತಮ ಕಥಾಹಂದರವಿರುವ ಚಿತ್ರಗಳನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಿರುವುದರಿಂದ ಹೊಸಬರ ಚಿತ್ರಗಳನ್ನು ಸ್ಟಾರ್ ಗಳೂ ಉಪೇಕ್ಷೆ ಮಾಡುವಂತಿಲ್ಲ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಉತ್ತಮ ಬೆಳವಣಿಗೆಯೇ ಸರಿ.