ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ’ಅರಿವು’

ಗುರುವಾರ, 19 ಜನವರಿ 2017 (11:07 IST)
ಒಂದು ಕಡೆ ಶಿಕ್ಷಣ ಎಂಬುದು ವ್ಯಾಪಾರವಾಗಿದ್ದರೆ, ಮತ್ತೊಂದೆಡೆ ಎಷ್ಟೋ ಮಕ್ಕಳಿಗೆ ಅಕ್ಷರಗಳೇ ಕೈಗೆಟುಕುತ್ತಿಲ್ಲ. ಇಂಥಾ ವಾತಾವರಣದಲ್ಲಿಯೇ ಮಹೇಂದ್ರ ಮುನ್ನೋತ್ ಅವರು ಶಿಕ್ಷಣದ ಮಹತ್ವ ಸಾರುವ ಸಮಾಜಮುಖಿ ಚಿತ್ರವೊಂದನ್ನು ನಿರ್ಮಾಣ ಮಾಡಿ ನಟಿಸಿದ್ದಾರೆ. ಇಂಥಾ ಸಂದೇಶ ಹೊಂದಿರುವ `ಅರಿವು’ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
 
ಮಹೇಂದ್ರ ಮನೂತ್ ಅವರು ಈಗಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ  ಹಾಗೂ  ಶಿಕ್ಷಣದ ಮಹತ್ವವನ್ನು ತಿಳಿಸಿಕೊಡುವ ಸಲುವಾಗಿಯೇ ಈ ಚಿತ್ರವನ್ನು ನಿರ್ಮಿಸಿದ್ದು, ರಂಗನಾಥ್  ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ಸೋಸಲೆ ಗಂಗಾಧರ್ ಅವರು ಬರೆದ ಅರಿವು ಎಂಬ ಕಾದಂಬರಿ ಮೂಲ ಪ್ರೇರಣೆಯಾಗಿತ್ತು. 
 
ಈ ಕಾದಂಬರಿಯನ್ನು ಈಗ ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಮಕ್ಕಳಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಅರಿವು ಚಿತ್ರದಲ್ಲಿ ಮಾಡಲಾಗಿದೆ.  ಹಳ್ಳಿಯ ಬಡ ಕುಟುಂಬದ ಹುಡುಗನೊಬ್ಬ  ಸರಿಯಾದ  ಶಿಕ್ಷಣ ಪಡೆಯದೆ ಯಾವ ರೀತಿ ಬೀದಿಗೆ ಬರುತ್ತಾನೆ,  ಇಡೀ ಸಿನಿಮಾ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತ ಹೋಗುತ್ತದೆ. 
 
ಮಕ್ಕಳಲ್ಲಿ ಶಿಕ್ಷಣದ ಬಗ್ಗೆ, ಅದರ ಮಹತ್ವದ ಬಗ್ಗೆ ತಿಳಿಸಿಕೊಡುವ ಪ್ರಯತ್ನವಾಗಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರದಲ್ಲಿ  ಒಟ್ಟು  ಆರು ಹಾಡುಗಳಿದ್ದು, ನವನೀತ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ