ಹತ್ತಿರದ ಚಿತ್ರಮಂದಿರಗಳಲ್ಲಿ ವಿಭಿನ್ನ ಪ್ರಯತ್ನದ ಚಿತ್ರ ’ಲೀ’

ಮಂಗಳವಾರ, 3 ಜನವರಿ 2017 (10:07 IST)
ಹೆಚ್.ಎಂ.ಶ್ರೀನಂದನ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಸಾಹಸ ಕಲೆಯ ಹಿನ್ನೆಲೆ ಹೊಂದಿರುವ ಚಿತ್ರ ‘ಲೀ’ ಇದೇ 13ರಂದು ರಾಜ್ಯಾದಂತ ತರೆಗೆ ಬರಲಿದೆ. ಕಳೆದ ವಾರ ಈ ಚಿತ್ರವನ್ನು ವಿಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ.  
 
ಈ ಚಿತ್ರದಲ್ಲಿ ‘ವುಷು’ ಎಂಬ ಕಲೆಯನ್ನು ಪ್ರಧಾನವಾಗಿ ತೆಗೆದುಕೊಳ್ಳಲಾಗಿದ್ದು,  ಕನ್ನಡದಲ್ಲಿ ಈವರೆಗೂ ಯಾರೂ ಮಾಡಿರದಂಥ ಒಂದು ವಿಶಿಷ್ಟ ಪ್ರಯತ್ನವಾಗಿ ‘ಲೀ’ ಮಾಡಿ ಬಂದಿದೆ. ಚಿತ್ರಕ್ಕೆ ಗುರುಕಿರಣ್ ಆನಂದರಾಜ್ ವಿಕ್ರಮ್ ಸಂಗೀತ, ಎಂ.ಯು.ನಂದಕುಮಾರ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ, ವಚನ ಶ್ರೀರಾಮ್ ಸಾಹಿತ್ಯ, ರಮೇಶ್ ನೃತ್ಯ ನಿರ್ದೇಶನ, 
ವಿನೋದ್, ಕುಂಗ್‍ಫೂ ಚಂದ್ರು ಸಾಹಸ, ಕೆ.ಗಿರೀಶ್ ಕುಮಾರ್ ಸಂಕಲನವಿದೆ. 
 
ಇದೊಂದು ಆ್ಯಕ್ಷನ್ ಚಿತ್ರವಾಗಿದ್ದು, ಸುಮಂತ್ ಈ ಚಿತ್ರಕ್ಕಾಗಿ ವುಷು ಎಂಬ ಏಳು ಮಾರ್ಷಲ್ ಆರ್ಟ್ಸ್‌ ಕಲೆಯನ್ನೊಳಗೊಂಡ ವಿದ್ಯೆಯನ್ನು ಮೂರು ತಿಂಗಳಿಂದ ಕಲಿತು ಸಿದ್ಧರಾಗಿದ್ದಾರೆ. ಬಹುಶಃ ಮಾರ್ಷಲ್ ಆರ್ಟ್ಸ್‌‌ ಚಿತ್ರವಾದ್ದರಿಂದಲೇ ಚಿತ್ರಕ್ಕೆ 'ಲೀ' ಎಂಬ ಹೆಸರು ಇಟ್ಟಿರುವ ಸಾಧ್ಯತೆ ಇದೆ. 'ವಜ್ರಕಾಯ' ಚಿತ್ರದಲ್ಲಿ ಶಿವರಾಜಕುಮಾರ್ ಅವರಿಗೆ ನಾಯಕಿಯಾಗಿದ್ದ ನಭಾ ನಟೇಶ್, ಈ ಚಿತ್ರದಲ್ಲಿ ಸುಮಂತ್‍ಗೆ ನಾಯಕಿಯಾಗಿ ನಟಿಸುತ್ತಿರುವುದು ವಿಶೇಷ.
 
ಸುಮಂತ್ ಶೈಲೇಂದ್ರ, ನಭಾನಟೇಶ್, ಸ್ನೇಹ, ನಮನಂದಿ, ಸಾಧುಕೋಕಿಲ, ರಂಗಾಯಣ ರಘು, ರಾಹುಲ್‍ದೇವ್, ಜಯಶಂಕರ್, ಅಚ್ಯುತ್ ಕುಮಾರ್, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ತಬಲನಾಣಿ ಮುಂತಾದವರ ತಾರಾಬಳಗವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ