ಬಾಲಿವುಡ್‌ಗೆ ಹೊರಟ ಕನ್ನಡದ ’ರಾಮಾ ರಾಮಾ ರೇ’

ಬುಧವಾರ, 21 ಡಿಸೆಂಬರ್ 2016 (12:30 IST)
ಕನ್ನಡಲ್ಲಿ ಸಕ್ಸಸ್ ಆದ ಚಿತ್ರಗಳು ಬೇರೆಬೇರೆ ಭಾಷೆಗಳಿಗೆ ರೀಮೇಕ್ ಆಗುವುದು ಸಾಮಾನ್ಯ. ಈಗಾಗಲೆ ಸಾಕಷ್ಟು ಚಿತ್ರಗಳು ಹಿಂದಿಗೆ ರೀಮೇಕ್ ಆಗಿವೆ. ಕೆಲವು ಚಿತ್ರಗಳು ಡಬ್ ಆಗಿದೆ. ಇದೀಗ ರಾಮ ರಾಮ ರೇ ಸಹ ಹಿಂದಿಗೆ ರೀಮೇಕ್ ಆಗುತ್ತಿದೆ.
 
ಸತ್ಯ ಪ್ರಕಾಶ್ ನಿರ್ದೇಶನದ ಈ ಚಿತ್ರ ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದು, ಈ ವರ್ಷ ಭಾರಿ ಸೌಂಡ್ ಮಾಡಿದ ಚಿತ್ರಗಳಲ್ಲಿ ಒಂದು. ಯಾವುದೇ ಸ್ಟಾರ್ ನಟರಿಲ್ಲದಿದ್ದರೂ ಚಿತ್ರ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. 
 
ಇದೀಗ ಈ ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಲು ಚಿತ್ರದ ವಿತರಕ ಸುಧೀರ್ ಮುಂದಾಗಿದ್ದಾರಂತೆ. ಈಗಾಗಲೆ ಮಾತುಕತೆ ಹಂತದಲ್ಲಿದ್ದು, ಎಲ್ಲವೂ ಓಕೆ ಆದರೆ ಹಿಂದಿಗೆ ರಾಮಾ ರಾಮಾ ರೇ ಹೊರಡಲಿದೆ. ಒಂದು ವೇಳೆ ರೀಮೇಕ್ ಸಾಧ್ಯವಾಗದಿದ್ದರೆ ಡಬ್ಬಿಂಗ್ ಮಾಡುವುದಾಗಿ ತಿಳಿಸಿದ್ದಾರೆ. 
 
ಹೆಬ್ಬುಲಿ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಉಮಾಪತಿ ಅವರು ಇದೇ ಚಿತ್ರವನ್ನು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ರೀಮೇಕ್ ಮಾಡಲು ಕೈಹಾಕಿದ್ದಾರೆ ಎಂಬ ಸುದ್ದಿಯೂ ಇದೆ. ಒಟ್ನಲ್ಲಿ ಒಳ್ಳೆ ಕಥೆಗೆ ಭಾಷೆ ಯಾವುದಾದರೇನು ಅಲ್ಲವೇ? 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ