ಇನ್ನು ಮುಂದೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಕಡ್ಡಾಯ

ಶುಕ್ರವಾರ, 2 ಡಿಸೆಂಬರ್ 2016 (10:21 IST)
ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಹ ಪ್ರತಿ ವರ್ಷ 12 ವಾರಗಳಿಗೆ ಕಡಿಮೆ ಇಲ್ಲದಂತೆ ಕನ್ನಡ ಚಲನಚಿತ್ರ ಪ್ರದರ್ಶಿಸಬೇಕೆಂಬ ನಿಬಂಧನೆಯನ್ನು ಪರವಾನಿಗೆಯಲ್ಲಿ ನಮೂದಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
 
ವಾಣಿಜ್ಯ ತೆರಿಗೆಗಳ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕ ಮನರಂಜನಾ ತೆರಿಗೆ ಕಾಯ್ದೆ 1958 ರ ಪ್ರಕರಣ 3- ಸಿ ಅನ್ವಯ ಕನ್ನಡ, ಕೊಡವ, ಕೊಂಕಣಿ, ತುಳು ಮತ್ತು ಬಂಜಾರಾ ಭಾಷೆಯ ಚಲನಚಿತ್ರ ಪ್ರದರ್ಶನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಹೊಸದಾಗಿ ಕಟ್ಟಲಾದ ಚಲನಚಿತ್ರ ಮಂದಿರಗಳಿಗೆ ಮೊದಲ ಪ್ರದರ್ಶನದಿಂದ 3 ವರ್ಷದವರೆಗೆ ಮನರಂಜನಾ ತೆರಿಗೆಯನ್ನು ವಿನಾಯಿತಿ ಮಾಡಲಾಗಿದೆ.
 
ವಿನಾಯಿತಿ ಪಡೆದ ಚಿತ್ರಮಂದಿರಗಳು ವರ್ಷದಲ್ಲಿ ಕನಿಷ್ಠ ಶೇ.75 ರಷ್ಟು ಕನ್ನಡ, ಕೊಡವ, ಕೊಂಕಣಿ, ತುಳು ಮತ್ತು ಬಂಜಾರಾ ಭಾಷೆಯ ಚಲನಚಿತ್ರಗಳನ್ನು ಪ್ರದರ್ಶಿಸಬೇಕೆಂದು ನಿಬಂಧನೆ ಹಾಕಾಲಾಗಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೂ ಇದೇ ನಿಯಮ ಅನ್ವಯಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ