ಮಾಲಾಶ್ರೀಗೆ ಹಿಟ್ ಹಾಡು ಕೊಟ್ಟ ಚಿತ್ರ ಸಾಹಿತಿ ಶ್ರೀರಂಗ ನಿಧನ

ಸೋಮವಾರ, 10 ಮೇ 2021 (09:44 IST)
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಸಾವಿನ ಸುದ್ದಿ ಬಂದಿದೆ. ಕನ್ನಡದ ಖ್ಯಾತ ಚಿತ್ರಸಾಹಿತಿ ಶ್ರೀರಂಗ ನಿನ್ನೆ ವಿಧಿವಶರಾಗಿದ್ದಾರೆ.

Photo Courtesy: Google

ನಟಿ ಮಾಲಾಶ್ರೀಗೆ ಹಿಟ್ ಹಾಡುಕೊಟ್ಟ ಖ್ಯಾತಿ ಅವರದ್ದು. ‘ಒಳಗೆ ಸೇರಿದರೆ ಗುಂಡು’, ‘ಜಟಕಾ ಬಂಡಿ ಹತ್ತಿ’ ಇತ್ಯಾದಿ ಹಿಟ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದರು.

86 ವರ್ಷ ವಯಸ್ಸಿನ ಶ್ರೀರಂಗ ವಯೋಸಹಜ ಖಾಯಿಲೆಯಿಂದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 1000 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದರು. ಆದರೆ ತಮ್ಮ ಕೊನೆಯ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ