ನಟಿ ಸೋನು ಪಾಟೀಲ್ ಗೆ ತಾಯಿಗೆ ನೆರವಾದ ಕಿಚ್ಚ ಸುದೀಪ್

ಸೋಮವಾರ, 10 ಮೇ 2021 (09:35 IST)
ಬೆಂಗಳೂರು: ನಟ ಕಿಚ್ಚ ಸುದೀಪ್ ಕಷ್ಟದಲ್ಲಿರುವವರಿಗೆ ನೆರವಾಗುವಲ್ಲಿ ಸದಾ ಮುಂದು. ಇದೀಗ ನಟಿ ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ಸೋನು ಪಾಟೀಲ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣ ಬೇಕಾಗಿತ್ತು. ಇದಕ್ಕೆ ಸುದೀಪ್ ನೆರವು ನೀಡಿದ್ದಾರೆ.

ಕಿಚ್ಚ ಸುದೀಪ್ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಸಾಕಷ್ಟು ನೆರವು ಮಾಡುತ್ತಾರೆ. ನೊಂದವರಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಾರೆ. ಈಗ ಸೋನು ಪಾಟೀಲ್ ತಾಯಿಗೂ ಚಿಕಿತ್ಸೆಗೆ ಬೇಕಾಗಿದ್ದ ಹಣ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ