ಎರಡನೇ ಮಗು ಬರಮಾಡಿಕೊಂಡ ನಟ ವಿಜಯ್ ಸೂರ್ಯ ದಂಪತಿ
ವಿಜಯ್ ದಂಪತಿಗೆ ಈಗಾಗಲೇ ಸೋಹನ್ ಎಂಬ ಪುತ್ರನಿದ್ದಾನೆ. ಇದೀಗ ದಂಪತಿಗೆ ಎರಡನೇ ಬಾರಿಗೆ ಗಂಡು ಮಗುವಾಗಿದೆ. ಜೂನ್ 2 ರಂದು ಮಗು ಜನಿಸಿದ್ದು ಒಂದು ತಿಂಗಳ ಬಳಿಕ ವಿಜಯ್ ಸೂರ್ಯ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಈ ಮೊದಲು ಮೊದಲ ಮಗುವಾದಾಗಲೂ ವಿಜಯ್ ದಂಪತಿ ತಡವಾಗಿ ವಿಷಯ ಬಹಿರಂಗಪಡಿಸಿದ್ದರು. ಸದ್ಯಕ್ಕೆ ಕನ್ನಡದಲ್ಲಿ ಲಚ್ಚಿ ಧಾರವಾಹಿ ಮತ್ತು ತೆಲುಗಿನಲ್ಲಿ ಕೃಷ್ಣಂ ಕಲ್ಪಿಂಡಿ ಇದರಿನಿ ಎಂಬ ಧಾರವಾಹಿಯಲ್ಲಿ ವಿಜಯ್ ನಾಯಕರಾಗಿ ನಟಿಸುತ್ತಿದ್ದಾರೆ. ತೆಲುಗು ಧಾರವಾಹಿಯ ಚಿತ್ರೀಕರಣಕ್ಕೆ ಹೈದರಾಬಾದ್ ಗೆ ಹೋಗಿದ್ದಾಗ ಪತ್ನಿಗೆ ಹೆರಿಗೆಯಾಗಿತ್ತು ಎಂಬ ವಿಚಾರವನ್ನು ಮಾಧ‍್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.