ತಮ್ಮ ಹುಡುಗನ ಪರಿಚಯಿಸಿದ ಖ್ಯಾತ ಕಿರುತೆರೆ ನಟಿ ಕಾವ್ಯಾ ಗೌಡ

ಸೋಮವಾರ, 26 ಏಪ್ರಿಲ್ 2021 (10:16 IST)
ಬೆಂಗಳೂರು: ಕನ್ನಡದಲ್ಲಿ ‘ರಾಧಾರಮಣ’, ‘ಗಾಂಧಾರಿ’ ಮುಂತಾದ ಧಾರವಾಹಿಗಳಲ್ಲಿ ನಟಿಸಿ ಕಿರುತೆರೆಯ ವೀಕ್ಷಕರ ಮೆಚ್ಚಿನ ನಾಯಕಿಯಾಗಿರುವ ಕಾವ್ಯಾ ಗೌಡ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.


ಎಂಗೇಜ್ ಮೆಂಟ್ ಮಾಡಿಕೊಂಡಿರುವ ಕಾವ್ಯಾ ತಮ್ಮ ಹುಡುಗನ ಜೊತೆಗಿರುವ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದುಬೈನಲ್ಲಿ ಈ ಜೋಡಿ ಫೋಟೋ ಶೂಟ್ ಮಾಡಿಸಿಕೊಂಡಿದೆ.

ಇತ್ತೀಚೆಗಷ್ಟೇ ಕಾವ್ಯಾ ಕಲರ್ಸ್ ಕನ್ನಡದ ಚ್ಯಾಟ್ ಕಾರ್ನರ್ ಶೋನಲ್ಲಿ ಭಾಗಿಯಾಗಿದ್ದಾಗ, ಸದ್ಯದಲ್ಲೇ ತಾವು ಮದುವೆಯಾಗುತ್ತಿರುವುದಾಗಿ ಹೇಳಿದ್ದರು. ಮನೆಯವರೇ ನನಗೆ ನಿಶ್ಚಯಿಸಿದ ಹುಡುಗ ಎಂದೂ ಹೇಳಿದ್ದರು. ಈಗ ಅಧಿಕೃತವಾಗಿ ತಮ್ಮ ಹುಡುಗನನ್ನು ಪರಿಚಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ