ಕಾಂತಾರ ಅಧ್ಯಾಯ 1 ರ ಫಸ್ಟ್ ಲುಕ್ ಟೀಸರ್ ವಿಡಿಯೋ ಇಲ್ಲಿದೆ
ಹೊಂಬಾಳೆ ಫಿಲಂಸ್ ಇತ್ತೀಚೆಗಷ್ಟೇ ನವಂಬರ್ 27 ರಂದು ಫಸ್ಟ್ ಲುಕ್ ಮತ್ತು ಮುಹೂರ್ತ ಕಾರ್ಯಕ್ರಮವಿರುವುದಾಗಿ ಘೋಷಿಸಿತ್ತು. ಅದರಂತೆ ಇಂದು ಉಡುಪಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಕಾರ್ಯಕ್ರ ನೆರವೇರಿದೆ.
ಅದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫಸ್ಟ್ ಲುಕ್ ನೋಡಿ ಜನರಿಗೆ ಚಿತ್ರದ ಬಗ್ಗೆ ಮತ್ತಷ್ಟು ತಿಳಿಯಲು ಕುತೂಹಲವುಂಟಾಗಿದೆ. ಪಕ್ಕಾ ವಾರಿಯರ್ ನಂತೆ ಖಡ್ಗ ಹಿಡಿದು ನಿಂತಿರುವ ರಿಷಬ್ ಲುಕ್ ನೋಡಿ ಎಂಥವರ ಎದೆಯೂ ಕ್ಷಣ ಝಲ್ಲೆನಿಸುವಂತಿದೆ. ಫಸ್ಟ್ ಲುಕ್ ಜೊತೆಗೆ ಟೀಸರ್ ಕೂಡಾ ಬಿಡುಗಡೆಯಾಗಿದ್ದು, ರಿಷಬ್ ಶೆಟ್ಟಿ ಅವತಾರ ವಿಶಿಷ್ಟವಾಗಿದೆ.
ಟೀಸರ್ ನಲ್ಲಿ ಕಾಂತಾರ ಅಧ್ಯಾಯ 1 ರಲ್ಲಿ ರಿಷಬ್ ಕದಂಬರ ಕಾಲದ ಕತೆ ಹೇಳಲಿದ್ದಾರೆ. ಟೀಸರ್ ನಲ್ಲಿ ತೋರಿಸಿರುವ ಹಿನ್ನಲೆ ದೃಶ್ಯವೇ ವಿಶಿಷ್ಟವಾಗಿದೆ. ಹೀಗಾಗಿ ಕಾಂತಾರ ಅಧ್ಯಾಯ 1 ಕೂಡಾ ಮತ್ತೊಂದು ಇತಿಹಾಸ ಸೃಷ್ಟಿಸುವ ನಿರೀಕ್ಷೆಯಿದೆ.