ಕಾಂತಾರ 2 ಬಗ್ಗೆ ಕೊನೆಗೂ ಬಿಗ್ ಅಪ್ ಡೇಟ್: ಫಸ್ಟ್ ಲುಕ್ ಬಿಡುಗಡೆ ದಿನ ತಿಳಿಸಿದ ಹೊಂಬಾಳೆ ಫಿಲಂಸ್

ಶನಿವಾರ, 25 ನವೆಂಬರ್ 2023 (09:30 IST)
Photo Courtesy: Twitter
ಬೆಂಗಳೂರು: ಕಾಂತಾರ 2 ಸಿನಿಮಾಗಾಗಿ ಎಲ್ಲರೂ ಎದಿರು ನೋಡುತ್ತಿದ್ದಾರೆ. ಇದೀಗ ಕಾಂತಾರ 1 ರ ಮುಂದುವರಿದ ಭಾಗದ ಮುಹೂರ್ತ ಮತ್ತು ಫಸ್ಟ್ ಲುಕ್ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಪ್ರಕಟಿಸಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಕಾಂತಾರ 2 ಫಸ್ಟ್ ಲುಕ್ ನವಂಬರ್ 27 ಕ್ಕೆ ಮಧ‍್ಯಾಹ್ನ 12.25 ಕ್ಕೆ ಬಿಡುಗಡೆಯಾಗಲಿದೆ. ಇದೇ ದಿನ ಮುಹೂರ್ತವೂ ಸರಳವಾಗಿ ನಡೆಯಲಿದೆ ಎನ್ನಲಾಗಿದೆ.

‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವುದರ ಜೊತೆಗೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ!’ ಎಂದು ಹೊಂಬಾಳೆ ಫಿಲಂಸ್ ಪ್ರಕಟಿಸಿದೆ.

ಕಾಂತಾರ 1 ಭಾರೀ ಯಶಸ್ವಿಯಾದ ಹಿನ್ನಲೆಯಲ್ಲಿ ಹೊಂಬಾಳೆ ಫಿಲಂಸ್, ರಿಷಬ್ ಶೆಟ್ಟಿ ಕಾಂತಾರ 2 ಗೆ ತಯಾರಿ ನಡೆಸಿದ್ದರು. ಕಳೆದ ಒಂದು ವರ್ಷದಿಂದ ಕಾಂತಾರ 2 ಗೆ ತಯಾರಿ ನಡೆದಿದೆ. ಇದೀಗ ಕೊನೆಗೂ ಅಂದುಕೊಂಡ ಸಮಯಕ್ಕೆ ಚಿತ್ರಕ್ಕೆ ಚಾಲನೆ ಸಿಗುತ್ತಿದೆ. ಡಿಸೆಂಬರ್ ನಿಂದ ಶೂಟಿಂಗ್ ಶುರುವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ