ಕಾಂತಾರ ಚಾಪ್ಟರ್ 1 ವೀಕೆಂಡ್ ಗಳಿಕೆ ಕೇಳಿದ್ರೆ ಶಾಕ್ ಆಗ್ತೀರಿ

Krishnaveni K

ಸೋಮವಾರ, 6 ಅಕ್ಟೋಬರ್ 2025 (09:31 IST)
ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದ್ದು ವೀಕೆಂಡ್ ನಲ್ಲಿ ಗಳಿಸಿದ ಮೊತ್ತ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಿ.

ಅಕ್ಟೋಬರ್ 2 ರಂದು ಬಿಡುಗಡೆಯಾದ ಕಾಂತಾರ ಚಾಪ್ಟರ್ 1 ಸಿನಿಮಾ ಕಲೆಕ್ಷನ್ ಕಳೆದ ನಾಲ್ಕು ದಿನಗಳಲ್ಲಿ 200 ಕೋಟಿ ರೂ. ದಾಟಿದೆ. ಅದರಲ್ಲೂ ವೀಕೆಂಡ್ ನಲ್ಲಿ ಹೌಸ್ ಫುಲ್ ಆಗಿ ಭರ್ಜರಿ ಗಳಿಕೆ ಮಾಡಿದೆ.

ಕಳೆದ ನಾಲ್ಕು ದಿನಗಳಲ್ಲಿ ವಿಶ್ವದಾದ್ಯಂತ ಕಾಂತಾರ ಚಾಪ್ಟರ್ 1 ಸಿನಿಮಾ 230 ಕೋಟಿ ರೂ. ಸನಿಹ ಕಲೆಕ್ಷನ್ ಮಾಡಿದೆ. ನಿನ್ನೆ ಬೆಂಗಳೂರಿನಲ್ಲಂತೂ ದಾಖಲೆಯ ಪ್ರದರ್ಶನ ಕಂಡಿತ್ತು. ಇದೀಗ ನಿನ್ನೆ ಒಂದೇ ದಿನ 61 ಕೋಟಿ ರೂ. ಬಾಚಿಕೊಂಡಿದೆ ಎಂದು ವರದಿಯಾಗಿದೆ.

ಮೊದಲ ದಿನವೇ ಸಿನಿಮಾ 65 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದರೊಂದಿಗೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 200 ಪ್ಲಸ್ ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಇನ್ನೊಂದು ವಾರದ ಮಟ್ಟಿಗೂ ಬಹುತೇಕ ಚಿತ್ರಗಳು ಹೌಸ್ ಫುಲ್ ಆಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ