ಜುಲೈ 6 ರಂದು ಝೀ-5 ವಾಹಿನಿಯಲ್ಲಿ ಕರೆನ್‍ಜಿತ್ ಕೌರ್: ದಿ ಅನ್‍ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ವೆಬ್ ಸಿರೀಸ್ ಬಿಡುಗಡೆಯಾಗಿದ್ದು, ಇದೀಗ 9.7 ಮಿಲಿಯನ್ ವಿಕ್ಷಣೆಗಳನ್ನು ಹೊಂದಿದೆ. ಈ ಚಿತ್ರದ ಟ್ರೈಲರ್‌ನಲ್ಲಿ ಆಕೆಯ ಬಾಲ್ಯದ ದಿನಗಳು, ಕುಟುಂಬ, ವಯಸ್ಕರ ಪತ್ರಿಕೆಗೆ ಅರೆ ಬೆತ್ತಲೆ ಫೋಟೋ ಶೂಟ್, ನೀಲಿ ಚಿತ್ರದ ದೃಶ್ಯಗಳು, ಆಕೆಯ ಬಾಲಿವುಡ್ ಎಂಟ್ರಿ ಇತ್ಯಾದಿ ತುಣಕುಗಳನ್ನು ತೋರಿಸಲಾಗಿದೆ.
ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ಸನ್ನಿ ಲಿಯೋನ್ ಅವರೇ ನಿರ್ವಹಿಸಲಿದ್ದು, ಸನ್ನಿ ಪತಿ ಪಾತ್ರವನ್ನು ದಕ್ಷಿಣ ಆಫ್ರಿಕಾದ ನಟ ಮಾರ್ಕ ಬೂಕ್ನರ್ ನಿರ್ವಹಿಸುತ್ತಿದ್ದಾರೆ. ಜುಲೈ 16 ರಂದು ಝೀ ನೆಟ್ವರ್ಕ್‌ನಲ್ಲಿ ಕರೆನ್‍ಜಿತ್ ಕೌರ್: ದಿ ಅನ್‍ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ವೆಬ್ ಸಿರೀಸ್ ಪ್ರಸಾರವಾಗಲಿದೆ.