ಕರೀನಾಗೆ ಈಗಲೇ ಮಗೂನಾ ? ಇಲ್ಲ ಇಲ್ಲ ಸಧ್ಯಕ್ಕಿಲ್ಲ !!

ಬುಧವಾರ, 15 ಅಕ್ಟೋಬರ್ 2014 (12:09 IST)
ಬಾಲಿವುಡ್ ನಟಿ ಕರೀನ ಕಪೂರ್ ಸಧ್ಯಕ್ಕೆ ಮಗುವನ್ನು ಹೆರ ಬೇಕು ಎನ್ನುವ ಉದ್ದೇಶ ಹೊಂದಿಲ್ಲ . ಈ ಸಂಗತಿಯನ್ನು ಅವರ ತಂದೆ ರಣಧೀರ್ ಕಪೂರ್ ಹೇಳಿದ್ದಾರೆ. 
 
ಸೂಪರ್ ನಾನಿ ಚಿತ್ರದಲ್ಲಿ ನಟಿ ರೇಖಾ ಜೊತೆ ಅಭಿನಯಿಸುತ್ತಿರುವ ರಣಧೀರ್ ಕಪೂರ್ ಅದರಲ್ಲಿ ತಾತನ ಪಾತ್ರಧಾರಿಯಾಗಿದ್ದಾರೆ. ಕರಿಷ್ಮಾಗೆ ಇಬ್ಬರು ಮಕ್ಕಳಿದ್ದಾರೆ. ತನಗೆ ಆ ಮೊಮ್ಮಕ್ಕಳನ್ನು ಕಂಡರೆ ಸಿಕ್ಕಾಪಟ್ಟೆ ಪ್ರಾಣ. ಆಗಾಗ ಅವರ ಮನೆಗೆ ಹೋಗಿ ಕಾಲ ಕಳೆಯುತ್ತೇನೆ.ಎಂದು  ಈ ಸಂದರ್ಭದಲ್ಲಿ ಹೇಳಿದ್ದಾರೆ ರಣಧೀರ್ ಸಾಬ್!
 
ಕರೀನಾಗೆ ಸಂತನ ಆದರೆ ಚಂದ ಎಂದು ನೀವು ಭಾವಿಸುತ್ತೀರಾ  ಎನ್ನುವ ಮೀಡಿಯಾ ಪ್ರಶ್ನೆಗೆ ಉತ್ತರಿಸುತ್ತ ಸೀನಿಯರ್ ಕಪೂರ್ ಸಾಬ್ ಅವರು ಸಧ್ಯಕ್ಕೆ ಮಕ್ಕಳ ಬಗ್ಗೆ ಗಮನ ನೀಡಲ್ಲ ಎಂದು ಆಕೆ ತನ್ನ ಬಳಿ ಹೇಳಿದ್ದಾಳೆ ಎಂದು ಹೇಳಿದ್ದಾರೆ. ಈ ಬಗ್ಗೆ ತಾನು ಹೆಚ್ಚು ಮಾತನಾಡಲಾರೆ. ಈಗಿನ ಜನರೇಶನ್ ಬಗ್ಗೆ ತಾವು ಹೆಚ್ಚು ಸಲಹೆ ನೀಡಲು ಸಾಧ್ಯವಿಲ್ಲ ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾರೆ ರಣಧೀರ್ ಕಪೂರ್. 
 

ವೆಬ್ದುನಿಯಾವನ್ನು ಓದಿ