ತೆರೆ ಮೇಲೆ ಒಂದಾಗುತ್ತಿದೆ ಮಾಜಿ ಜೋಡಿ ಕರೀನಾ-ಶಾಹಿದ್....!

ಗುರುವಾರ, 18 ಡಿಸೆಂಬರ್ 2014 (10:49 IST)
ನಿಮಗೆ ಈ ಸುದ್ದಿ ಹೇಳಿದಾಗ ಸಂದೇಹ , ಆಶ್ಚರ್ಯ ಉಂಟಾಗುತ್ತದೆ   ಎನ್ನೋದು ನಮಗೆ ಗೊತ್ತಿದೆ. ಆದರೆ ಆ ಸುದ್ದಿ ಹಾಗಿದೆ ಆದ್ದರಿಂದ ನಾವು ಹೇಳಲೇ ಬೇಕಾಗಿದೆ. ಆದರೆ ಈ ಸುದ್ದಿ ಬಹುತೇಕ ಅಧಿಕೃತ ಆಗಿದೆ ಎಂದೇ ಹೇರಳ ಬಹುದಾಗಿದೆ. ಮಾಜಿ ಪ್ರೇಮಿಗಳಾದ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಚಿತ್ರ ಒಂದರಲ್ಲಿ ಮತ್ತೆ ಒಟ್ಟಾಗಿ ಅಭಿನಯಿಸುತ್ತಿದ್ದಾರೆ. ಅನೇಕ ವರ್ಷಗಳ ಕಾಲ ಪ್ರೀತಿಸಿ, ಎಲ್ಲ ಕಡೆ ಕಂಡು ಕ್ಯಾಮರಾಗಳಿಗೆ ಪೋಸ್ ಕೊಟ್ಟ ಈ ಜೋಡಿ ಆ ಬಳಿಕ ಬೇರೆಬೇರೆ ಆಯ್ತು . ಅದಾದ ಬಳಿಕ ಆಕೆಯ ಬದುಕಲ್ಲಿ  ಪ್ರಭಾವ ಬೀರಿದ್ದು ಚೋಟೆ ಮಿಯ ಸೈಫ್ ಅಲಿ ಖಾನ್. ಈಗ ಈ ಮಾಜಿ ಪ್ರೇಮಿಗಳು ತಮ್ಮ ಮುಂದಿನ ಚಿತ್ರ ಉಡ್ತಾ ಪಂಜಾಬಿ ಯಲ್ಲಿ ಒಟ್ಟಿಗೆ ಕೆಲಸ ನಿರ್ವಹಿಸುತ್ತಿದ್ದಾರೆ.
ಆರಂಭದಲ್ಲಿ ಇಮ್ರಾನ್ ಹಶ್ಮಿ ಇದ್ದರು, ಆದರೆ ಅವರು ತಂಡದಿಂದ ಹೊರ ಬಂಡ ಬಳಿಕ ಅಲ್ಲಿಗೆ ಆಯುಷ್ಮಾನ್ ಮತ್ತು ಆಲಿಯ ಭಟ್ ನ್ನು ಆಯ್ಕೆ ಮಾಡಿಕೊಂಡಿದ್ದಾರೆ   ಎನ್ನಲಾಗಿತ್ತು. ಆದರೆ ಈಗ ಆಲಿಯ ಅಭಿಷೇಕ್   ಚೌಬೆ ಅವರ ನಿರ್ದೇಶನದ ಚಿತ್ರದಲ್ಲಿ ಬ್ಯುಸಿ ಯಾಗಿದ್ದಳಂತೆ. ಆದರು  ಸಹ ಈ  ಚಿತ್ರದಲ್ಲಿ ಆಲಿಯ ಶಾಹಿದ್ ಕಪೂರ್ ಜೊತೆ ಅಭಿನಯಿಸುತ್ತಿದ್ದಾಳೆ. ಮುಖ್ಯ ಪಾತ್ರದಲ್ಲಿ ಕರೀನ ಕಪೂರ್ ಖಾನ್ ಕಾಣಿಸಿ ಕೊಳ್ಳುತ್ತಿದ್ದಾಳೆ. ಈ ಮುಖಾಂತರ ಒಟ್ಟಿಗೆ ನಟಿಸುವ ಹಳೆಯಪ್ರೇಮಿಗಳು ತೆರೆಯ ಮೇಲೆ ರೋಮ್ಯಾನ್ಸ್ ಮಾಡುತ್ತಿಲ್ಲ. ಏ ಜವಾನಿ ಹಾಯ್ ದಿವಾನಿ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಪ್ರೇಮ ಮುರಿದುಕೊಂಡಿದ್ದರು ಸಹಿತ ಒಟ್ಟಿಗೆ ನಟಿಸಿದ್ದರು ಪ್ರೇಮಿಗಳಾಗಿ! 

ವೆಬ್ದುನಿಯಾವನ್ನು ಓದಿ