ಕರ್ನಾಟಕ ಚಲನ ಚಿತ್ರ ಅಕಾಡಮಿಗೆ ಸಿಂಗ್ ಇಸ್ ಕಿಂಗ್ !

ಮಂಗಳವಾರ, 25 ನವೆಂಬರ್ 2014 (12:46 IST)
ಅಂತೂ ಇಂತೂ ಈ ಸಂಗತಿಗೊಂದು ಅಂತಿಮ ತಿರುವು ಕಂಡಿದೆ. ಇಷ್ಟು ದಿನ ನೆನಗುದಿಯಲ್ಲಿ ಇದ್ದ ಸಂಗತಿಗೊಂದು ತಿರುವು ಸಿಕ್ಕಿದೆ. ಅದಕ್ಕಿಂತ ಸ್ಪಷ್ಟವಾಗಿ ಹೇಳುವುದಾದರೆ ಆ ಸಂಗತಿಗೊಂದು ಸೂಕ್ತವಾದ ಸ್ಪಷ್ಟನೆ ದೊರಕಿದೆ. 
 
ಕರ್ನಾಟಕ ರಾಜ್ಯ ಸರ್ಕಾರ ಈಗ ಕರ್ನಾಟಕ ಚಲನಚಿತ್ರ  ಅಕಾಡಮಿ ಕಾರ್ಯದರ್ಶಿ ಸ್ಥಾನ ತುಂಬಲು ಸಮ್ಮತಿ ನೀಡಿದೆ. ಆ ಸ್ಥಳಕ್ಕೆ ಕನ್ನಡದ ಅಪರೂಪದ ನಿರ್ದೇಶಕ ಮತ್ತು ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಅವರು ಆಯ್ಕೆಯಾಗಿದ್ದಾರೆ. ಸಿಂಗ್ ಬಾಬು ಎನ್ನುವ ಹೆಸರಿನಿಂದ ಜನಪ್ರಿಯರಾಗಿರುವ  ರಾಜೇಂದ್ರ ಸಿಂಗ್ ಬಾಬು ಅವರು ಕಾರ್ಯದರ್ಶಿ ಸ್ಥಾನವನ್ನು ಅಲಂಕರಿಸಲಿದ್ದಾರೆ  . 
 
ಸುಮಾರು ಒಂದೂವರೆ ವರ್ಷಗಳಿಂದ ನಟಿ ತಾರ ಅಲಂಕರಿಸಿದ್ದರು. ಆಕೆಯ ಹೆಸರನ್ನು ಆಗ ಇದ್ದ ಅಧ್ಯಕ್ಷರು ಸೂಚಿಸಿದ್ದರು. ಅದಾದ ಬಳಿಕ ಕೆಸಿಎ  ಚಲನಚಿತ್ರ ಅಕಾಡಮಿ ಅಧ್ಯಕ್ಷ ಸ್ಥಾನಕ್ಕೆ ವಿ. ರವಿಚಂದ್ರನ್, ಡಾ. ಜಯಮಾಲ, ಬಸಂತ್ ಕುಮಾರ್ ಪಾಟಿಲ್, ಗಿರೀಶ್ ಕಾಸರವಳ್ಳಿ ಮುಂತಾದವರನ್ನು ಆಯ್ಕೆ ಮಾಡಿತ್ತು. ಆದರೆ ಈಗ ಕಾರ್ಯದರ್ಶಿ ಸ್ಥಾನ ಬದಲಾಗಿದೆ. ಅಧಿಕಾರ ಬಾಬು ಕೈ ಸೇರಿದೆ. ಈಗ ಅಲ್ಲಿ ಸಿಂಗ್ ಇಸ್ ಕಿಂಗ್ !
 

ವೆಬ್ದುನಿಯಾವನ್ನು ಓದಿ