ಗಾಯಕಿ ಸುಚಿತ್ರಾ ಮೇಲೆ ಧನುಷ್ ತಂಡದಿಂದ ಹಲ್ಲೆ?

ಶನಿವಾರ, 25 ಫೆಬ್ರವರಿ 2017 (06:54 IST)
ಕೋಲಿವುಡ್ ನಟ ಧನುಷ್ ಸೇರಿದಂತೆ ಇನ್ನೊಂದಿಷ್ಟು ಮಂದಿಯನ್ನು ಉದ್ದೇಶಿಸಿ ಗಾಯಕಿ ಸುಚಿತ್ರಾ ಕೆಲವು ದಿನಗಳ ಹಿಂದೆ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು ನಟ ಧನುಷ್ ಮತ್ತವರ ತಂಡ ತನ್ನ ಮೇಲೆ ಹಲ್ಲೆ ಮಾಡಿದೆ ಎಂದು ಆರೋಪಿಸಿದ್ದರು. ಫೆ.21ರಂದು ಅವರು ಟ್ವೀಟ್ ಪೋಸ್ಟ್ ಆಗಿತ್ತು.
 
ಬಹುಶಃ ಅವರ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ಸುಚಿತ್ರಾ ಪತಿ ಕಾರ್ತೀಕ್ ಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ. ಕೆಲವರು ಆಕೆಯ ಅಕೌಂಟ್ ಹ್ಯಾಕ್ ಮಾಡಿ, ಟ್ವೀಟ್ ಮಾಡಿದ್ದಾರೆ ಎಂದವರು ಸ್ಪಷ್ಟಪಡಿಸಿದ್ದಾರೆ. 
 
"ಶುಭೋದಯ, ಸುಚಿ (ಸುಚಿತ್ರಾ) ಟ್ವಿಟ್ಟರ್ ಖಾತೆ ಹ್ಯಾಕಿಂಗ್‍ಗೆ ಬಲಿಯಾಗಿದ್ದ ಕಾರಣ ಕೆಲವು ದಿನಗಳಿಂದ ನಮ್ಮ ಕುಟುಂಬಿಕರು ಆತಂಕಪಡುವಂತಾಗಿದೆ. ಈವತ್ತು ಆಕೆಯ ಅಕೌಂಟನ್ನು ಮತ್ತೆ ಸರಿಪಡಿಸಿದೆವು. ಕಳೆದ ಕೆಲವು ದಿನಗಳಿಂದ ಬರುತ್ತಿರುವ ಟ್ವೀಟ್‌ಗಳು ಸುಚಿ ಪೋಸ್ಟ್ ಮಾಡಿದ್ದಲ್ಲ. ಅವೆಲ್ಲಾ ಅವಾಸ್ತವಿಕ. ಇದರಿಂದ ಗೊಂದಲವಾಗಿದೆ. ಕ್ಷಮಿಸಿ. ಮಾಧ್ಯಮಗಳು ಇದನ್ನು ಸೂಕ್ಷ್ಮವಾಗಿ ತೋರಿಸಬೇಕೆಂದು ಕೋರುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ