ಜಾಕಿ ಚಾನ್ ಜೊತೆ ಕತ್ರಿನಾ ಕೈಫ್ ನಟನೆ ?

ಬುಧವಾರ, 24 ಜೂನ್ 2015 (10:16 IST)
ಕತ್ರಿನಾ ಕೈಫ್  ಸಾಮಾನ್ಯವಾಗಿ ಹೆಚ್ಚು ಹೆಚ್ಚು ಮಾಧ್ಯಮಗಳ ಮುಂದೆ ಬರುತ್ತಿರುವುದು ತನ್ನ ಪ್ರೀತಿಯ ವಿಷಯಕ್ಕೆ ಸಂಬಂಧಪಟ್ಟಂತೆ. ಆಕೆ ಲೀವ್ ಇನ್, ಆಕೆಯ ಬಾಳ ಗೆಳೆಯ ರಣಬೀರ್ ಹೀಗೆಹತ್ತು ಹಲವಾರು ಸಂಗತಿಗಳು ಸದಾ ಸುತ್ತುವರೆಯುತ್ತಿರುತ್ತವೆ. ಆದರೆ ಈಗಬಂದ ಸುದ್ದಿ ಎಂದರೆ ಕತ್ರಿನಾ ಅವರು ಕುಂಗ್ ಫೂ ಯೋಗಾ ಎನ್ನುವ ಚಿತ್ರದಲ್ಲಿ ನಟಿಸುತ್ತಿಲ್ಲವಂತೆ. ಆ ಬಗ್ಗೆ  ವಿವರವಾಗಿ ಹೇಳ್ತಿವಿ ಆಗ ನಿಮಗೆ ವಿಷಯ ಏನೆಂದು ಅರ್ಥವಾಗುತ್ತದೆ. ನಟಿ ಕತ್ರಿನಾ ಅವರು ಹಾಂಕಾಂಗ್ ಕಮರ್ಷಿಯಲ್ ಆರ್ಟ್ಸ್ ಸೂಪರ್ ಸ್ಟಾರ್ ಜಾಕಿ ಚಾನ್ ಜೊತೆ ನಟಿಸುವ ಅವಕಾಶ ಪಡೆದಿದ್ದಾರೆ,ಕುಂಗ್ ಫೂ ಯೋಗಾ ಎನ್ನುವ ಹೆಸರಿನ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಿಂದ ಎಲ್ಲಡೆ ಕೇಳಿ ಬಂದಿತ್ತು. 
ಹಾಲಿವುಡ್ ಸೂಪರ್ ಸ್ಟಾರ್ ಜೊತೆ ನಟಿಸುವ ಅವಕಾಶ ಪಡೆದ ಬಗ್ಗೆ ಎಲ್ಲರೂ ಮಾತನಾಡಿಕೊಂಡಿದ್ದರು, ಆಕೆ ವಿರೋಧಿಗಳು ಹೊಟ್ಟೆಕಿಚ್ಚು ಪಟ್ಟಿದ್ದೂ ಉಂಟು. ಆದರೆ ಆಕೆಯು ಇನ್ನು ಆ ಚಿತ್ರದಲ್ಲಿ ನಟಿಸಲು ಸಮ್ಮತಿ ಮುದ್ರೆ ನೀಡಿಲ್ಲವಂತೆ. ಆಕೆಯ ಮ್ಯಾನೇಜರ್ ಆ ಬಗ್ಗೆ ಹೇಳಿದ್ದಾರೆ.  ಕುಂಗ್ ಫೂ ಯೋಗಾ ಚಿತ್ರದಲ್ಲಿ ಕತ್ರಿನಾ ಚೈನೀಸ್ ವಿಶ್ವ ವಿದ್ಯಾಲಯದಲ್ಲಿ  ಭಾರತೀಯ ಪ್ರೊಫೆಸರ್ ಪಾತ್ರಧಾರಿ, ಜಾಕಿ ಜಾನ್ ಅದರಲ್ಲಿ ಆರ್ಕಿಯಾಲಜಿಸ್ಟ್ ಪಾತ್ರಧಾರಿ. 
 
ಸ್ಟಾನ್ಲಿ ಟೋಂಗ್ ಅವರ ನಿರ್ದೇಶನದ ಈ ಚಿತ್ರಕ್ಕೆ ಆರಂಭದಲ್ಲಿ  ಆಮೀರ್ ಖಾನ್  ಅವರ  ಹೆಸರು  ಕೇಳಿ ಬಂದಿತ್ತು. ಆದರೆ ಈರೀತಿ ಹರಡಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ ಆಮೀರ್. ಅವರು ಪೀಕೆ ಚಿತ್ರದ ಬಳಿಕ ದಂಗಲ್ ಚಿತ್ರದ ಶೂಟಿಂಗ್ ನಲ್ಲಿ ಮಗ್ನರಾಗಿದ್ದಾರೆ. ಕತ್ರಿನಾ ಕೈಫ್ ಫಿತೂರ್ ಹಾಗೂ ಜಗ್ಗಾ ಜಾಸೂಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆ ಈಗ ಕತ್ರಿನಾ ಈ ಚಿತ್ರದಲ್ಲಿ ನಟಿಸುತ್ತಾರಾ ಇಲ್ಲವಾ ಎನ್ನುವುದೇ ಬಾಲಿವುಡ್ ಮಂದಿಯಲ್ಲಿ ಯಕ್ಷಪ್ರಶ್ನೆಯಾಗಿ ಕಾಡಿದೆ. 

ವೆಬ್ದುನಿಯಾವನ್ನು ಓದಿ