ಕೇರಳ ಸುಳ್ಳು ಪೋಕ್ಸೋ: 9ತಿಂಗ್ಳು ಜೈಲಿನಲ್ಲಿ ಕಳೆದ ವೃದ್ಧ, ಆಗಿದ್ದೇನು ಗೊತ್ತಾ

Sampriya

ಗುರುವಾರ, 31 ಜುಲೈ 2025 (17:25 IST)
ತಿರುವನಂತಪುರಂ: ಅಪ್ರಾಪ್ತ ಬಾಲಕಿಯೊಬ್ಬಳು ನೀಡಿದ ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ  ಕೇರಳದ ಅಲಪ್ಪುಳ ಮೂಲದ 75 ವರ್ಷದ ವ್ಯಕ್ತಿಯೊಬ್ಬರು ಸುಮಾರು ಒಂಬತ್ತು ತಿಂಗಳ ಜೈಲುವಾಸ ಅನುಭವಿಸಿದ ಘಟನೆ ವರದಿಯಾಗಿದೆ. 

ಜಿಲ್ಲೆಯ ಶಾಲೆಯೊಂದರಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ ಜೋಸೆಫ್ ವಿರುದ್ಧ ಶಾಲಾ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರಿಂದ, ಅಗ್ನಿಪರೀಕ್ಷೆಯನ್ನು ಎದುರಿಸಬೇಕಾಯಿತು.

ನಿಜವಾದ ಅಪರಾಧಿ ಯುವಕನನ್ನು ಉಳಿಸಲು, ಜೋಸೆಫ್‌ ವಿರುದ್ಧ ಬಾಲಕಿ ಸುಳ್ಳು ಆರೋಪ ಮಾಡಿದ್ದಳು. 

2022ರ ನವೆಂಬರ್‌ನಲ್ಲಿ ಬಾಲಕಿಯ ದೂರಿನ ಮೇರೆಗೆ ಜೋಸೆಫ್‌ನನ್ನು ಬಂಧಿಸಿ ರಿಮಾಂಡ್‌ಗೆ ಒಳಪಡಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ