16 ದಿನದಲ್ಲಿ 1000 ಕೋಟಿ ಬಾಚಿದ ಕೆಜಿಎಫ್-2: ಈ ಸಾಧನೆ ಮಾಡಿದ 4ನೇ ಚಿತ್ರ!
ಯಶ್ ನಟಿಸಿ ಪ್ರಶಾಂತ್ ನೀಲ್ ನಿರ್ದೇಶಿಸಿದ ಕೆಜಿಎಫ್-2 ಚಿತ್ರ ಎರಡೇ ವಾರದಲ್ಲಿ 1000 ಕೋಟಿ ರೂ. ಸಂಗ್ರಹಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ವಿನೂತನ ದಾಖಲೆ ಬರೆದಿದೆ.
ಏಪ್ರಿಲ್ 14ರಂದು ಬಿಡುಗಡೆ ಆದ ಈ ಚಿತ್ರ ಜಗತ್ತಿನಾದ್ಯಂತ 2 ವಾರದಲ್ಲಿ 1000 ಕೋಟಿ ರೂ. ಬಾಚಿದೆ. ಈ ಮೂಲಕ 1000 ಕೋಟಿ ಸಂಗ್ರಹಿಸಿದ ಕನ್ನಡದ ಮೊದಲ ಹಾಗೂ ಒಟ್ಟಾರೆ ನಾಲ್ಕನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದಂಗಾಲ್, ಬಾಹುಬಲಿ-2 ಮತ್ತು ಆರ್ ಆರ್ ಆರ್ ಚಿತ್ರದ ನಂತರ 1000 ಕೋಟಿ ಬಾಚಿದ ಯಶ್ ಚಿತ್ರದ ನಾಗಾಲೋಟ ಕಡಿಮೆ ಆಗಿಲ್ಲ ಎಂಬುದು ಮತ್ತೊಂದು ಅಚ್ಚರಿಯ ವಿಷಯ.
ಹಲವು ಹೊಸ ಚಿತ್ರಗಳ ಪೈಪೋಟಿ ನಡುವೆಯೂ ಕೆಜಿಎಫ್-2 ಮುನ್ನುಗ್ಗುತ್ತಿದ್ದು, ಅತ್ಯಲ್ವ ಅವಧಿಯಲ್ಲಿ ಈ ಸಾಧನೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ. ಮೊದಲ ವಾರವೇ 551 ಕೋಟಿ ರೂ. ಬಾಚಿದ್ದ ರಾಕಿಭಾಯ್, ಎರಡನೇ ವಾರದಲ್ಲಿ ಸುಮಾರು 500 ಕೋಟಿ ರೂ. ಸಂಗ್ರಹಿಸಿದೆ.