ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಬರ್ತ್ ಡೇ: ಹರಿದಾಡುತ್ತಿದೆ ಹೊಸ ಸುದ್ದಿ!
ಹೀಗಾಗಿ ಪ್ರಶಾಂತ್ ನೀಲ್ ಗೆ ಹುಟ್ಟುಹಬ್ಬಕ್ಕೆ ಶುಭ ಕೋರುವುದರ ಜತೆಗೆ ಅಭಿಮಾನಿಗಳು ಬೇಗ ಕೆಜಿಎಫ್ 2 ಬಗ್ಗೆ ಹೊಸ ಸುದ್ದಿ ಕೊಡಿ. ಈ ಸಿನಿಮಾಗೋಸ್ಕರ ಕಾಯ್ತಿದ್ದೇವೆ ಎಂದು ಆಗ್ರಹಿಸಿದ್ದಾರೆ. ಇದರ ಜತೆಗೆ ಬಾಹುಬಲಿ ಖ್ಯಾತಿಯ ಪ್ರಭಾಸ್ ಜತೆಗೆ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಪ್ರಶಾಂತ್ ನೀಲ್ ಬಗ್ಗೆ ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಯ ಅಭಿಮಾನಿಗಳೂ ಅಭಿಮಾನವಿಟ್ಟುಕೊಂಡಿದ್ದಾರೆ ಎಂಬುದಂತೂ ಸತ್ಯ.