ಕೆಜಿಎಫ್ 2 ಸಿನಿಮಾ ಪ್ರಚಾರಕ್ಕೆ ಕಟೌಟ್ ರೆಡಿಯಾಯ್ತು

ಬುಧವಾರ, 2 ಮಾರ್ಚ್ 2022 (09:30 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಪ್ರಚಾರಕ್ಕೆ ಈಗಲೇ ಸಿದ್ಧತೆ ಶುರುವಾಗಿದೆ. ಈ ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ.

ಈಗಲೇ ಸಿನಿಮಾದ ತ್ರಿಡಿ ಕಟೌಟ್ ರೆಡಿಯಾಗಿದೆ. ಈ ವಿಶೇಷ ಕಟೌಟ್ ಥಿಯೇಟರ್ ಗಳ ಮುಂದೆ ರಾರಾಜಿಸಲಿದೆ. ಕೆಜಿಎಫ್ 2 ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಕೆಜಿಎಫ್ 2 ಸಿನಿಮಾದ ಟೀಸರ್ ಒಂದು ಬಿಟ್ಟು ಇನ್ನು ಯಾವುದೇ ಅಪ್ ಡೇಟ್ ಇದುವರೆಗೆ ಸಿಕ್ಕಿಲ್ಲ. ಸದ್ಯದಲ್ಲೇ ಅಪ್ ಡೇಟ್ ನೀಡುವುದಾಗಿ ಹೊಂಬಾಳೆ ಫಿಲಂಸ್ ಪ್ರಕಟಿಸಿತ್ತು. ಚಿತ್ರದ ಹಾಡೊಂದು ಸದ್ಯದಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ