ಜೇಮ್ಸ್ ಹಾಡಿನಲ್ಲಿ ರಚಿತಾ, ಆಶಿಕಾ, ಚಂದನ್ ಶೆಟ್ಟಿ ಸರ್ಪೈಸ್ ಎಂಟ್ರಿ
ಈ ಹಾಡಿನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಂ, ಆಶಿಕಾ ರಂಗನಾಥ್, ಶ್ರೀಲೀಲಾ ಮತ್ತು ಚಂದನ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಹೀರೋ ಇಂಟ್ರಡಕ್ಷನ್ ಸಾಂಗ್ ಇದಾಗಿದ್ದು, ಈ ಸ್ಟಾರ್ ಕಲಾವಿದರನ್ನು ನೋಡಿ ಪ್ರೇಕ್ಷಕರಿಗೆ ನಿಜಕ್ಕೂ ಅಚ್ಚರಿಯಾಗಿದೆ.
ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ಭರ್ಜರಿ ಸ್ಟೆಪ್ಸ್ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ಚರಣ್ ರಾಜ್ ಸಂಗೀತ ನಿರ್ದೇಶನದ ಹಾಡು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದೆ.