ಕೆಜಿಎಫ್ 2 ರಿಲೀಸ್ ಡೇಟ್ ನಿಂದ ಹೊಸಬರ ಸಿನಿಮಾಗಳು ನಿರಾಳ

ಮಂಗಳವಾರ, 24 ಆಗಸ್ಟ್ 2021 (12:10 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಬಿಡುಗಡೆ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವುದರಿಂದ ಹೊಸಬರ ಸಿನಿಮಾಗಳು ನಿಟ್ಟುಸಿರು ಬಿಡುವಂತಾಗಿದೆ.


ಡಿಸೆಂಬರ್ ನಲ್ಲಿ ಕೆಜಿಎಫ್ 2 ಬಿಡುಗಡೆಯಾಗಬಹುದು ಎಂದು  ಈ ಮೊದಲು ಸುದ್ದಿ ಹಬ್ಬಿತ್ತು. ಆದರೆ ಯಾವುದೂ ಸ್ಪಷ್ಟವಾಗಿರಲಿಲ್ಲ. ಒಂದು ವೇಳೆ ಕೆಜಿಎಫ್ 2 ಬಿಡುಗಡೆಯಾಗಿದ್ದರೆ ಹೊಸಬರ ಸಿನಿಮಾಗಳಿಗೆ ಥಿಯೇಟರ್ ಗಳೇ ಸಿಗುತ್ತಿರಲಿಲ್ಲ.

ಮೊದಲೇ ಸಂಕಷ್ಟದಲ್ಲಿರುವ ಹೊಸ ನಿರ್ಮಾಪಕರಿಗೆ ದೊಡ್ಡ ಸಿನಿಮಾ ಬಂದರೆ ಅದರ ಹೊಡೆತ ತಡೆಯುವ ಶಕ್ತಿಯಿಲ್ಲ. ಆದರೆ ಈಗ ಕೆಜಿಎಫ್ 2 ಬಿಡುಗಡೆ ಏಪ್ರಿಲ್ ಗೆ ಮುಂದೂಡಿಕೆಯಾಗಿರುವುದರಿಂದ ಸದ್ಯಕ್ಕೆ ಬಿಡುಗಡೆಗೆ ಕಾದಿರುವ ನಿರ್ಮಾಪಕರು ನಿರಾಳವಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ