ಕೆಜಿಎಫ್ 2 ಚಿತ್ರದ ಬಗ್ಗೆ ಬಂದ ಈ ಸುದ್ದಿ ಬರೀ ಸುಳ್ಳಂತೆ!

ಶನಿವಾರ, 22 ಆಗಸ್ಟ್ 2020 (09:20 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಕೆಜಿಎಫ್ 2 ಚಿತ್ರೀಕರಣ ಮರಳಿ ಆರಂಭವಾಗಿದೆ ಎಂದು ಸುದ್ದಿ ಹಬ್ಬಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಕೊನೆಯ ಹಂತ ಮುಗಿಸಿಬಿಡೋಣ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಕೆಲವು ಲೊಕೇಷನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರಿಂದ ಚಿತ್ರೀಕರಣ ಶುರುವಾಗಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು.


ಆದರೆ ಈ ವರದಿಗಳ ಬೆನ್ನಲ್ಲೇ ನಿರ್ಮಾಪಕ ಕಾರ್ತಿಕ್ ಗೌಡ ಚಿತ್ರೀಕರಣ ಶುರುವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆಗಸ್ಟ್ 26 ರಿಂದ ಕೆಜಿಎಫ್ 2 ಚಿತ್ರೀಕರಣ ಮರು ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಈಗ ಹರಿದಾಡುತ್ತಿರುವ ಫೋಟೋಗಳು ಚಿತ್ರೀಕರಣದ ಸೆಟ್ ಅಲ್ಲ. ಅದು ಹಳೆಯ ಫೋಟೋಗಳು ಎಂದು ಕಾರ್ತಿಕ್ ಸ್ಪಷ್ಟನೆ ನೀಡಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ