ಬೆಂಗಳೂರು: ಕೆಜಿಎಫ್ 2 ಸಿನಿಮಾ ಈ ತಿಂಗಳು ಶೂಟಿಂಗ್ ಮುಗಿಸುವ ನಿರೀಕ್ಷೆಯಲ್ಲಿದೆ. ಈ ನಡುವೆ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಷಯವೊಂದು ಓಡಾಡುತ್ತಿದೆ.
ಸಿನಿಮಾ ಫಸ್ಟ್ ಲುಕ್ ಬಿಟ್ಟರೆ ಚಿತ್ರತಂಡ ಇದುವರೆಗೆ ಬೇರೆ ಯಾವುದೇ ಅಪ್ ಡೇಟ್ ಕೊಡದೇ ಇದ್ದರೂ ಕೆಜಿಎಫ್ 2 ಬಗ್ಗೆ ಜನರಲ್ಲಿ ಭಾರೀ ಕ್ರೇಜ್ ಇದೆ.
ಇದೀಗ ಸಿನಿಮಾ ಈ ವರ್ಷ ದಸರಾ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ ವೇಳೆಗೆ ತೆರೆ ಕಾಣಲಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಚಿತ್ರತಂಡ ಈ ಬಗ್ಗೆ ಏನನ್ನೂ ಖಚಿತಪಡಿಸಿಲ್ಲ.