ಕೆಜಿಎಫ್ 2 ಟ್ರೈಲರ್ ಲಾಂಚ್ ಗೆ ಕ್ಷಣಗಣನೆ: ಟ್ರೈಲರ್ ಗೆ ಲಾಂಚ್ ಮಾಡಲಿರುವ ಸ್ಟಾರ್ ಗಳು ಇವರೇ

ಭಾನುವಾರ, 27 ಮಾರ್ಚ್ 2022 (16:53 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಟ್ರೈಲರ್ ಇಂದು ಸಂಜೆ 6.40 ಕ್ಕೆ ಲಾಂಚ್ ಆಗಲಿದ್ದು, ಇದಕ್ಕಾಗಿ ಭಾರೀ ಸಿದ್ಧತೆ ನಡೆದಿದೆ.
 

ಕೆಜಿಎಫ್ 2 ಟ್ರೈಲರ್ ನ್ನು ವಿವಿಧ ಭಾಷೆಗಳಲ್ಲಿ ಆಯಾ ಭಾಷೆಯ ಸ್ಟಾರ್ ನಟರು ಲಾಂಚ್ ಮಾಡುತ್ತಿದ್ದಾರೆ. ಹಿಂದಿಯಲ್ಲಿ ಫರ್ಹಾನ್ ಅಖ್ತರ್, ತಮಿಳಿನಲ್ಲಿ ಸೂರ್ಯ, ತೆಲುಗಿನಲ್ಲಿ ರಾಮ್ ಚರಣ್ ತೇಜ್ ಮತ್ತು ಮಲಯಾಳಂನಲ್ಲಿ ಪೃಥ್ವಿ ರಾಜ್ ಟ್ರೈಲರ್ ಲಾಂಚ್ ಮಾಡಲಿದ್ದಾರೆ.

ಇನ್ನು, ಕೆಜಿಎಫ್ 2 ಟ್ರೈಲರ್ ನ್ನು ಸಿನಿಮಾ ರೀತಿಯಲ್ಲಿ ಸಾರ್ವಜನಿಕರಿಗೆ ವೀಕ್ಷಿಸಲು ಯಶ್ ಅಭಿಮಾನಿಗಳು ವಿವಿದೆಡೆ ಬೃಹತ್ ಸ್ಕ್ರೀನ್ ವ್ಯವಸ್ಥೆ ಮಾಡಿದ್ದಾರೆ. ಬೆಳಿಗ್ಗೆಯಿಂದಲೇ ಸಿನಿಮಾದ ಯಶಸ್ಸಿಗಾಗಿ ಯಶ್ ಅಭಿಮಾನಿಗಳು ಪೂಜೆ, ಹವನ ನಡೆಸಿ ಪ್ರಾರ್ಥನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ