ಜೀರೋ v/s ಕೆಜಿಎಫ್ ಓಪನಿಂಗ್ ಡೇ ಕಲೆಕ್ಷನ್ ನಲ್ಲಿ ಯಾರು ಮುಂದು?

ಶನಿವಾರ, 22 ಡಿಸೆಂಬರ್ 2018 (10:52 IST)
ಬೆಂಗಳೂರು: ಕೆಜಿಎಫ್ ಮತ್ತು ಬಾಲಿವುಡ್ ನ ಜೀರೋ ಸಿನಿಮಾ ಒಂದೇ ದಿನ ತೆರೆಗೆ ಬಂದಿವೆ. ಆದರೆ ಇವರಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಮೊದಲ ದಿನದ ಗಳಿಕೆ ಹೆಚ್ಚು ಮಾಡಿದ್ದು ಯಾರು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.


ಮೂಲಗಳ ಪ್ರಕಾರ ಕೆಜಿಎಫ್ ಹೊಸ ಸಂಚಲನ ಮೂಡಿಸಿದ್ದಂತೂ ನಿಜ. ಈ ಚಿತ್ರ ಬುಕಿಂಗ್ ವಿಚಾರದಲ್ಲಿ, ಗಳಿಕೆಯಲ್ಲಿ ಜೋರೋಗಿಂತ ಮುಂದಿದೆ ಎನ್ನಲಾಗುತ್ತಿದೆ. ಕೆಜಿಎಫ್ ಬೆಂಗಳೂರಿನಲ್ಲಿ ಮೊದಲ ದಿನ ಸುಮಾರು 4 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಇನ್ನು, ಒಟ್ಟಾರೆಯಾಗಿ ಈ ಚಿತ್ರ ಮೊದಲ ದಿನ 24 ರಿಂದ 25 ಕೋಟಿ ಗಳಿಕೆ ಮಾಡಿದೆ ಎಂಬುದು ಮಾರುಕಟ್ಟೆ ತಜ್ಞರ ಲೆಕ್ಕಾಚಾರ.

ಇನ್ನು ಶಾರುಖ್ ಖಾನ್ ಅಭಿನಯದ ಜೀರೋ ಕೂಡಾ ಭಾರೀ ಕುತೂಹಲ ಸೃಷ್ಟಿಸಿದ್ದ ಚಿತ್ರ. ಶಾರುಖ್ ಚಿತ್ರದ ಮೊದಲ ದಿನದ ಗಳಿಕೆ ಅಂದಾಜಿನ ಪ್ರಕಾರ 20 ಕೋಟಿ ರೂ. ಅಂದರೆ ಮೊದಲ ದಿನದ ಗಳಿಕೆಯಲ್ಲಿ ಕೆಜಿಎಫ್ ಮುಂದಿದೆ ಎಂದೇ ಅರ್ಥ. ಕನ್ನಡ ಚಿತ್ರವೊಂದು ಬಾಲಿವುಡ್ ಚಿತ್ರದ ಗಳಿಕೆಗೇ ಕುತ್ತು ತರುತ್ತಿದೆ ಎಂದರೆ ಅದು ಸ್ಯಾಂಡಲ್ ವುಡ್ ನ ಹೆಗ್ಗಳಿಕೆಯೇ ಸರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ