ಖಾನ್ ಗಳು ಇನ್ನೂ 100 ವರ್ಷ ಇದೇ ರೀತಿ ಕೆಲಸ ಮಾಡಲಿ: ಅಮಿತಾಬ್

ಮಂಗಳವಾರ, 13 ಅಕ್ಟೋಬರ್ 2015 (11:19 IST)
ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಅಮಿತಾಬ್ ಬಚ್ಚನ್ ಬಾಲಿವುಡ್ ನಲ್ಲಿ ಹವಾ ಎಬ್ಬಿಸುತ್ತಿರುವ ಮೂವರು ಖಾನ್ ಗಳಿಗೆ ಶುಭ ಹಾರೈಸಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಆಮೀರ್ ಬಾಲಿವುಡ್ ನಲ್ಲಿ ಒಳ್ಳೇ ಕೆಲಸ ಮಾಡುತ್ತಿದ್ದಾರೆ. ಇದನ್ನು ಹೀಗೇ 100 ವರ್ಷಗಳ ಕಾಲ ಕೆಲಸ ಮಾಡಿಕೊಂಡು ಹೋಗಲಿ ಅಂದಿದ್ದಾರೆ.
ಬರ್ತಡೇ ವೇಳೆ ಬಿಗ್ ಬಿ ಬಳಿ ಮಾಧ್ಯಮದವರು ಶಾರುಖ್ ಖಾನ್ ಈಗಾಗಲೇ 50 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರಲ್ಲಾ ಎಂದು ಪ್ರಶ್ನಿಸಿದ್ರು. ಇದಕ್ಕೆ ಉತ್ತರಿಸಿದ ಬಿಗ್ ಬಿ ಮೂವರು ಖಾನ್ ಗಳೂ ಕೂಡ ಉತ್ತಮ ಕೆಲಸ ಮಾಡುತ್ತಿದ್ದಾರೆ.ಅವರು ಅನೇಕ ಮಂದಿಗೆ ಸ್ಫೂರ್ತಿಯಾಗಿದ್ದಾರೆ.ಅವರು ಸ್ಫೂರ್ತಿಯ ಸೆಲೆಗಳಿದ್ದಂತೆ. ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.
 
ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ ಬಿಗ್ ನಾನು ನನ್ನ ಹಾದಿಯಲ್ಲಿ ಸಾಗುತ್ತಿದ್ದೇನೆ. ಮುಂದೆ ಏನಾಗುತ್ತೆ ಅಂತಾ ನನಗೆ ಗೊತ್ತಿಲ್ಲ. ನನಗೆ ಎಷ್ಟು ಕಾಲ ಕೆಲಸ ಮಾಡಲು ಆಗುತ್ತೋ ಅಷ್ಟು ಕಾಲ ನಾನು ಕೆಲಸ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ