ಆಕಾಂಕ್ಷ ಸಿಂಗ್ ಜತೆ ಕಿಚ್ಚ ಸುದೀಪ್ ರೊಮ್ಯಾಂಟಿಕ್ ಸಾಂಗ್ ಇಂದು ರಿಲೀಸ್

ಮಂಗಳವಾರ, 16 ಜುಲೈ 2019 (09:37 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಸಿನಿಮಾ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಇದೀಗ ಒಂದೊಂದಾಗಿ ಹಾಡುಗಳು ಬಿಡುಗಡೆಯಾಗುತ್ತಿವೆ.


ಮೊನ್ನೆಯಷ್ಟೇ ಪೈಲ್ವಾನ್ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೀಗ ಮತ್ತೊಂದು ಹಾಡು ಬಿಡುಗಡೆಯಾಗುತ್ತಿದೆ.

ಕಿಚ್ಚ ಸುದೀಪ್ ಮತ್ತು ನಾಯಕಿ ಆಕಾಂಕ್ಷಾ ನಡುವಿನ ರೊಮ್ಯಾಂಟಿಕ್ ಹಾಡೊಂದು ಇಂದು ಬಿಡುಗಡೆಯಾಗುತ್ತಿದೆ. ಕಣ್ಮಣಿಯೇ ಎಂದು ಆರಂಭವಾಗುವ ಈ ಹಾಡು ಇಂದು ಸಂಜೆ 3.06 ನಿಮಿಷಕ್ಕೆ ಲಾಂಚ್ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ