ಪೈಲ್ವಾನ್ ಸಿನಿಮಾದ ಈ ಪವರ್ ಫುಲ್ ಹಾಡಿನ ವಿಡಿಯೋ ನಾಳೆ ಬಿಡುಗಡೆ

ಶನಿವಾರ, 31 ಆಗಸ್ಟ್ 2019 (09:23 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಕಣ್ಮಣಿಯೇ ಹಾಡಿನ ವಿಡಿಯೋ ಈಗಾಗಲೇ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿದೆ.


ಕಿಚ್ಚ ಸುದೀಪ್ ಈ ಹಾಡಿನಲ್ಲಿ ಫುಲ್ ಬೋಲ್ಡ್ ಆಗಿ ನಾಯಕಿ ಜತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡು ಈಗಾಗಲೇ ದಾಖಲೆಯ ವೀಕ್ಷಣೆ ಪಡೆದಿದೆ.

ಈಗ ಪೈಲ್ವಾನ್ ನ ಮತ್ತೊಂದು ಖಡಕ್ ಹಾಡಿನ ವಿಡಿಯೋ ಬಿಡುಗಡೆಯಾಗುತ್ತಿದೆ. ‘ಬಾರೋ ಪೈಲ್ವಾನ್’ ಎಂಬ ಟೈಟಲ್ ಟ್ರ್ಯಾಕ್ ನ ವಿಡಿಯೋ ನಾಳೆ ಸಂಜೆ ಬಿಡುಗಡೆಯಾಗುತ್ತಿದೆ. ಈ ಹಾಡಿನಲ್ಲಿ ಕಿಚ್ಚ ಸುದೀಪ್ ಜತೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೂಡಾ ಹೆಜ್ಜೆ ಹಾಕಿರುವುದು ವಿಶೇಷವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ