ಗೋಲ್ಡನ್ ಸ್ಟಾರ್ ಗಣೇಶ್ ಗೆ ಜೀವ ಕೊಟ್ಟ ಪವರ್ ಸ್ಟಾರ್ ಅಪ್ಪು ಹಾಡು

ಶನಿವಾರ, 31 ಆಗಸ್ಟ್ 2019 (09:19 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಕಳೆದ ಕೆಲವು ಸಮಯದಿಂದ ಒಂದು ಬ್ರೇಕ್ ಗಾಗಿ ಕಾಯುತ್ತಿದ್ದರು. ಒಂದು ಉತ್ತಮ ಸಿನಿಮಾ ಮಾಡಿ ಮತ್ತೆ ಪ್ರೇಕ್ಷಕರಿಂದ ಸೈ ಎನಿಸಿಕೊಳ್ಳುವ ಪ್ರಯತ್ನದಲ್ಲಿದ್ದರು.

 

ಬೇರೆ ಬೇರೆ ಪ್ರಯತ್ನ ಮಾಡಿದರೂ ಯಾಕೋ ಗಣೇಶ್ ಲಕ್ ಕುದುರಿರಲಿಲ್ಲ. ಆದರೆ ಈಗ ಗೀತಾ ಸಿನಿಮಾ ಗಣೇಶ್ ಗೆ ಹೊಸ ಇಮೇಜ್ ತಂದುಕೊಡುವ ಹಾಗಿದೆ. ಗೋಕಾಕ್ ಚಳವಳಿಯ ಹೀರೋಗಳಿಗೆ ಅರ್ಪಿಸಿ ಕನ್ನಡದ ಹೋರಾಟದ ಬಗೆಗಿರುವ ಸಿನಿಮಾ ಗೀತಾ. ಈ ಸಿನಿಮಾ ಮೂಲಕ ಗಣೇಶ‍್ ಭರ್ಜರಿ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಅದಕ್ಕೆ ಸಾಥ್ ಕೊಟ್ಟಿರುವುದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪವರ್ ಫುಲ್ ಹಾಡು. ಪುನೀತ್ ಹಾಡಿರುವ ಕನ್ನಡದ ಕುರಿತಾಗಿನ ಹಾಡು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಹಾಡು ಕೇಳಿ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಕನ್ನಡದ ಬಗ್ಗೆ ಇತ್ತೀಚೆಗೆ ಮೂಡಿಬಂದಿರುವ ಖಡಕ್ ಹಾಡು ಇದು ಎಂದು ಮೆಚ್ಚಿದ್ದಾರೆ. ಹೀಗಾಗಿ ಈ ಹಾಡು ಹಿಟ್ ಲಿಸ್ಟ್ ಸೇರಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ