ಲೇಡಿ ಸೂಪರ್ ಸ್ಟಾರ್ ಮಂಜು ವಾರಿಯರ್ ಭೇಟಿ ಮಾಡಿದ ಕಿಚ್ಚ ಸುದೀಪ್ ದಂಪತಿ

ಸೋಮವಾರ, 21 ಡಿಸೆಂಬರ್ 2020 (09:07 IST)
ಬೆಂಗಳೂರು: ಫ್ಯಾಂಟಮ್ ಸಿನಿಮಾ ಶೂಟಿಂಗ್ ಗಾಗಿ ಕೇರಳಕ್ಕೆ ತೆರಳಿದ್ದ ವೇಳೆ ಕಿಚ್ಚ ಸುದೀಪ್ ದಂಪತಿ ಮಲಯಾಳಂ ಲೇಡಿ ಸೂಪರ್ ಸ್ಟಾರ್ ಮಂಜು ವಾರಿಯರ್ ಭೇಟಿ ಮಾಡಿದ್ದಾರೆ.


ಸುದೀಪ್ ಪತ್ನಿ ಮೂಲತಃ ಕೇರಳ ಮೂಲದವರು. ಹೀಗಾಗಿ ಮಲಯಾಳಂ ನಟಿಯರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಭೇಟಿಯ ಫೋಟೋವನ್ನು ಮಂಜು ವಾರಿಯರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಲ್ಲದೆ, ಪ್ರಿಯಾ ಮತ್ತು ಸುದೀಪ್ ಸರ್ ನಿಮ್ಮನ್ನು ಭೇಟಿ ಮಾಡಿದ್ದು ಖುಷಿ ನೀಡಿತು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಕೂಡಾ ನಿಮ್ಮಂತಹ ಸರಳ, ಸುಂದರ ವ್ಯಕ್ತಿತ್ವದ ವ್ಯಕ್ತಿಯನ್ನು ಭೇಟಿ ಮಾಡಿದ್ದು ನಮಗೆ ಖುಷಿ ಎಂದಿದ್ದಾರೆ. ಇನ್ನು, ಸುದೀಪ್ ದಂಪತಿ ಮಂಜು ವಾರಿಯರ್ ಭೇಟಿಯಾಗಿದ್ದ ಫೋಟೋ ನೋಡಿದ ನೆಟ್ಟಿಗರು ಹಾಗಿದ್ದರೆ ಫ್ಯಾಂಟಮ್ ನಲ್ಲಿ ಹಾಡಿಗೆ ಹೆಜ್ಜೆ ಹಾಕಲಿರುವ ಸ್ಟಾರ್ ನಟಿ ಇವರೇನಾ ಎಂದು ಪ್ರಶ್ನಿಸಿದ್ದಾರೆ. ಆದರೆ ಇದೊಂದು ಸೌಹಾರ್ದಯುತ ಭೇಟಿ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ