ಕನ್ನಡ ಬಿಗ್ ಬಾಸ್ ಸುವರ್ಣದಲ್ಲಿ ಪ್ರಸಾರ ?

ಬುಧವಾರ, 23 ಏಪ್ರಿಲ್ 2014 (10:31 IST)
ಕಳೆದ ವರ್ಷ ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಸಂಭ್ರಮ ಇತ್ತು. ಅದಕ್ಕೆ ಕಾರಣ ಈಟಿವಿ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆಗುತ್ತಿತ್ತು, ಅದೇ ರೀತಿ ಸುವರ್ಣ ಚಾನೆಲ್ ನಲ್ಲಿ ಕನ್ನಡದ ಕೋಟ್ಯಾಧಿಪತಿ ಈ ಕಾರ್ಯಕ್ರಮಗಳು ಅತಿ ಹೆಚ್ಚು ಜನಪ್ರಿಯ ಆಗಲು ಮುಖ್ಯ ಕಾರಣ  ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್. ಕನ್ನಡ ಚಿತ್ರರಂಗದ ಈ ಘಟಾನುಘಟಿ ನಾಯಕ ನಟರು ಕಾರ್ಯಕ್ರಮದ ಪ್ರೆಸೆಂಟರ್   ಆಗಿದ್ದರು   ನಿರೀಕ್ಷಿಸಿದಂತೆ   ಅದು ಸೂಪರ್ ಡೂಪರ್ ಯಶಸ್ವಿ ಆಗಿತ್ತು. 
 
ಈಗ ಎರಡು ಕಾರ್ಯಕ್ರಮಗಳ ಬಗ್ಗೆ ಸ್ವಲ್ಪವೂ ಸುದ್ದಿ ಇಲ್ಲ. ಇತ್ತೀಚೆಗಷ್ಟೇ ಸುದೀಪ್ ಅವರು ತಮ್ಮ ಮನದ ಭಾವವನ್ನು ಟ್ವಿಟ್ಟರ್  ಮುಖಾಂತರ ವ್ಯಕ್ತ ಪಡಿಸಿ ತಾವು ಈ ಬಾರಿಯೂ ಬಿಗ್ ಬಾಸ್ ನ್ನು ಹೋಸ್ಟ್  ಮಾಡುವುದಾಗಿ ಹೇಳಿದ್ದರು. ಆದರೆ ಸದ್ಯಕ್ಕೆ ಅದರ ಬಗ್ಗೆ ಯಾವುದೇ ಗದ್ದಲ ಇಲ್ಲ, ಆದರೆ ಒಂದು ಸುದ್ದಿಯ ಪ್ರಕಾರ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಸುವರ್ಣ ಚಾನೆಲ್ ಗೆ ವರ್ಗಾವಣೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಅಂದರೆ ರಿಯಾಲಿಟಿ ಶೋಗಳ ಹೊಸ ಪ್ರಪಂಚ ಬಿಡಿಸಿಟ್ಟ ಸುವರ್ಣ ಚಾನೆಲ್ ನಲ್ಲಿ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಆಗಲಿದೆ ಎಂದಾಯ್ತು. 
 
ಇಷ್ಟರ ನಡುವೆಯೂ ಸುದೀಪ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರ ಇಲ್ಲವಾ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅವರು ವಾರಾಂತ್ಯದಲ್ಲಿ ಬರುತ್ತಿದ್ದ ಸುದೀಪ್ ಅವರ ಮಾತು ಕೇಳಲು ಟೀವಿ ಮುಂದೆ ವೀಕ್ಷಕರು ಕಾಡು ಕುಳಿತಿರುತ್ತಿದ್ದರು. ಸುದೀಪ್ ಅವರ ಕೈಲಿ ಈಗ ಕನ್ನಡ ಮತ್ತು ಎರಡು ತಮಿಳು ಚಿತ್ರಗಳಿವೆ. ಈ ಪ್ರಾಜೆಕ್ಟ್ ಗಳು ಅವರು ಮತ್ತೆ ಕಾರ್ಯಕ್ರಮದ ಹೋಸ್ಟ್ ಆಗುವ ಸಾಧ್ಯತೆಯನ್ನು ಕಡಿಮೆ ಮಾಡಿದೆ. ಆದರು ಸಹ ಏನಾಗುತ್ತದೆ ಎನ್ನುವುದು ಸದ್ಯಕ್ಕೆ ಯಾರಿಗೂ ತಿಳಿದಿಲ್ಲ.. ಸುದೀಪ್ ಇವ್ಯಾವುದರ ಉಸಾಬರಿ ಬೇಡ ಅಂತ ಕೇವಲ ಸಿನಿಮಾದಲ್ಲಿ ಇರ್ತಾ ಇಲ್ಲವೇ, ಅಭಿಮಾನಿಗಳಿಗಾಗಿ ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳುತ್ತಾರಾ... ಸದ್ಯಕ್ಕೆ ನಮ್ಮ ಉತ್ತರ ಗೊತ್ತಿಲ್ಲ ! 

ವೆಬ್ದುನಿಯಾವನ್ನು ಓದಿ