ಪತ್ನಿ ಪ್ರಿಯಾಗೆ ಬಹಿರಂಗವಾಗಿ ಕಿಚ್ಚ ಸುದೀಪ್ ಹೀಗೆ ಹೇಳಿದ್ದೇಕೆ ಗೊತ್ತಾ?!
ಬುಧವಾರ, 19 ಡಿಸೆಂಬರ್ 2018 (10:06 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ನಡುವೆ ಹಿಂದೆ ಏನೇ ನಡೆದಿದ್ದರೂ ಈಗ ಮತ್ತೆ ಒಂದಾಗಿರುವ ದಂಪತಿ ಒಬ್ಬರ ಯಶಸ್ಸಿಗೆ ಒಬ್ಬರು ಹೆಗಲು ಕೊಡುತ್ತಿದ್ದಾರೆ.
ಸುದೀಪ್ ಸಿನಿಮಾ ಕೆಲಸಗಳಲ್ಲಿ ಸದಾ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುವ ಪ್ರಿಯಾಗೆ ಈಗ ಟ್ವಿಟರ್ ನಲ್ಲಿ 1 ಲಕ್ಷ ಫಾಲೋವರ್ ಗಳನ್ನು ಹೊಂದಿದ ಖುಷಿ. ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಮಾತ್ರವೇ ಈ ಮಟ್ಟಿಗೆ ಫಾಲೋವರ್ ಗಳಿರುತ್ತಾರೆ. ಆದರೆ ಸೆಲೆಬ್ರಿಟಿ ಪತ್ನಿಯಾದರೂ, ಅಷ್ಟೇ ಚಾರ್ಮ್ ಉಳಿಸಿಕೊಂಡಿರುವ ಪ್ರಿಯಾಗೆ ಪತಿ ಸುದೀಪ್ ಶುಭ ಹಾರೈಸಿದ್ದಾರೆ.
‘ನಿಜಕ್ಕೂ ಅದ್ಭುತ ಪ್ರಿಯಾ.. ಅಭಿನಂದನೆಗಳು ಪಿಯಾ...’ ಎಂದು ಕಿಚ್ಚ ಪ್ರೀತಿಯಿಂದ ಪತ್ನಿಗೆ ಶುಭ ಹಾರೈಸಿದ್ದಾರೆ. ಕಿಚ್ಚನ ಈ ಪ್ರೀತಿಯ ಶುಭ ಹಾರೈಕೆಗೆ ಪ್ರತಿಯಾಗಿ ಪ್ರಿಯಾ ಕೂಡಾ ಪ್ರೀತಿಯಿಂದ ‘ಥ್ಯಾಂಕ್ಯೂ ದೀ....’ ಎಂದು ಧನ್ಯವಾದ ಸಲ್ಲಿಸಿದ್ದಾರೆ. ಅಂದ ಹಾಗೆ, ಪ್ರಿಯಾ ಈ ಸಾಧನೆಗೆ ಹಲವರು ಅವರಿಗೆ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ