ಬರ್ತ್ ಡೇ ಸಂಭ್ರಮದಲ್ಲಿರುವ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿಮಾನಿಗಳಿಗೆ ಕೊಟ್ಟ ಗಿಫ್ಟ್ ಏನು ಗೊತ್ತಾ?

ಸೋಮವಾರ, 17 ಡಿಸೆಂಬರ್ 2018 (09:44 IST)
ಬೆಂಗಳೂರು: ಉಗ್ರಂ ಖ್ಯಾತಿಯ ರೋರಿಂಗ್ ಸ್ಟಾರ್ ಶ್ರೀ ಮುರಳಿಗೆ ಇಂದು ಬರ್ತ್ ಡೇ ಸಂಭ್ರಮ. ನಿನ್ನೆ ಮಧ್ಯರಾತ್ರಿಯಿಂದಲೇ ಅವರ ಮನೆ ಎದುರು ಅಭಿಮಾನಿಗಳು ಬಂದು ಕೇಕ್ ಕಟ್ ಮಾಡಿ ಮೆಚ್ಚಿನ ನಟನ ಬರ್ತ್ ಡೇ ಆಚರಿಸುತ್ತಿದ್ದಾರೆ.


ಈ ನಡುವೆ ತಮ್ಮ ಬರ್ತ್ ಡೇ ಸಂಭ್ರಮ ಆಚರಿಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿರುವ ಶ್ರೀ ಮುರಳಿ ಈ ಬಾರಿಯ ಬರ್ತ್ ಡೇ ತನಗೆ ನಿಜಕ್ಕೂ ವಿಶೇಷ ಎಂದಿದ್ದಾರೆ.

ಅದಕ್ಕೆ ಕಾರಣವೂ ಇದೆ. ಇಂದು ಶ್ರೀ ಮುರಳಿ ಅಭಿನಯದ ‘ಭರಾಟೆ’ ಚಿತ್ರದ ಟೀಸರ್ ಮತ್ತು ‘ಮದಗಜ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದೆ. ಇವೆರಡನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಸಂಜೆ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಶ್ರೀ ಮುರಳಿ ಈ ಬಾರಿ ಭರ್ಜರಿ ಗಿಫ್ಟನ್ನೇ ರೆಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ