ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಕೇಳಲು ಕಿಚ್ಚ ಸುದೀಪ್ ನೆರವು

ಸೋಮವಾರ, 16 ಆಗಸ್ಟ್ 2021 (10:30 IST)
ಬೆಂಗಳೂರು: ಕಿಚ್ಚ ಸುದೀಪ್ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಮಕ್ಕಳಿಗೆ ನೆರವಾದ ಸುದ್ದಿಗಳನ್ನು ಈ ಮೊದಲು ಓದಿರುತ್ತೀರಿ. ಈಗ ಆನ್ ಲೈನ್ ನಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳಿಗೆ ಕಿಚ್ಚ ನೆರವಾಗಲು ಮುಂದೆ ಬಂದಿದ್ದಾರೆ.


ಸುದೀಪ್ ತಮ್ಮ ಕಿಚ್ಚ ಚ್ಯಾರಿಟೇಬಲ್ ಟ್ರಸ್ಟ್ ಮುಖಾಂತರ ಹೊಸ ಆಪ್ ನ್ನು ಬಿಡುಗಡೆ ಮಾಡಿದ್ದು ಇದು ಆನ್ ಲೈನ್ ಪಾಠ ಕೇಳುವ ವಿದ್ಯಾರ್ಥಿಗಳಿಗೆ ಯಾವುದೇ ಅಡೆತಡೆಯಿಲ್ಲದೇ ಪಾಠ ಕೇಳಲು ನೆರವಾಗಲಿದೆ.

ಡಾರ್ಕ್ ಬೋರ್ಡ್ ಆನಿಮೇಷನ್ ಎಜುಕೇಷನ್ ಎಂಬ ಆಪ್ ಬಳಸಿ ಆನ್ ಲೈನ್ ಕ್ಲಾಸ್ ಮಾಡಬಹುದಾಗಿದೆ.  ಈ ಆಪ್ ಬಳಸಿ ಡಾರ್ಕ್ ಬೋರ್ಡ್ ರೂಂ  ಮಾಡಿ ಪಾಠ ಮಾಡಬಹುದು. ಅಥವಾ ಪಾಠವನ್ನು ರೆಕಾರ್ಡ್ ಮಾಡಿ ವಿದ್ಯಾರ್ಥಿಗಳಿಗೆ ಕಳುಹಿಸಬಹುದು.ಇಲ್ಲಿ ವಿದ್ಯಾರ್ಥಿಗಳು ಮೌಖಿಕ ತರಗತಿಯಲ್ಲಿ ಕೂತು ಪಾಠ ಕೇಳಿದಂತೆಯೇ ಅನುಭವ ಸಿಗುತ್ತದೆ. ಇದನ್ನು ಸರ್ಕಾರಿ, ಖಾಸಗಿ ಶಾಲೆಗಳು ಬಳಸಿಕೊಳ್ಳಬಹುದಾಗಿದೆ. ಸದ್ಯದಲ್ಲೇ ಈ ಆಪ್ ಬಗ್ಗೆ ಸರ್ಕಾರಕ್ಕೂ ಮನವರಿಕೆ ಮಾಡಿಕೊಡಲು ಕಿಚ್ಚ ಚ್ಯಾರಿಟೇಬಲ್ ಟ್ರಸ್ಟ್ ಯೋಜನೆ ಹಾಕಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ