ಮಯಾಂಕ್ ಆಟವನ್ನು ಭರಪೂರ ಹೊಗಳಿದ ಕಿಚ್ಚ ಸುದೀಪ್

ಸೋಮವಾರ, 21 ಸೆಪ್ಟಂಬರ್ 2020 (11:26 IST)
ದುಬೈ: ಐಪಿಎಲ್ 13 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ಕನ್ನಡಿಗ ಮಯಾಂಕ್ ಅಗರ್ವಾಲ್ ನಿನ್ನೆಯ ಪಂದ್ಯದಲ್ಲಿ ಆಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

ಒಂದೆಡೆ ಸತತವಾಗಿ ವಿಕೆಟ್ ಉರುಳುತ್ತಿದ್ದರೂ ಕೆಚ್ಚೆದೆಯಿಂದ ಹೋರಾಡಿದ ಅಗರ್ವಾಲ್ 89 ರನ್ ಗಳಿಸಿ ಔಟಾದರು. ಆದರೆ ಅವರ ಹೋರಾಟದ ಮನೋಭಾವವನ್ನು ಎಲ್ಲರೂ ಕೊಂಡಾಡಿದ್ದಾರೆ. ವಿಶೇಷವಾಗಿ ನಟ ಕಿಚ್ಚ ಸುದೀಪ್ ಮಯಾಂಕ್ ಆಡಿದ ಪರಿಯನ್ನು ಕೊಂಡಾಡಿದ್ದಾರೆ. ‘ಚೆನ್ನಾಗಿ ಆಡಿದೆ ಮಯಾಂಕ್. ನಿನ್ನ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ. ಈ ಕೊರೋನಾ ಸಮಯದಲ್ಲಿ ನಮಗೆಲ್ಲಾ ಮನರಂಜನೆ ನೀಡಿದೆ’ ಎಂದು ಕಿಚ್ಚ ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ