ಇಬ್ಬರೂ ಉತ್ತಮ ಗೆಳೆಯರಾಗಿದ್ದು ಈಗ ಕಿಚ್ಚ ಸುದೀಪ್ ಗಾಗಿ ಉಪೇಂದ್ರ ರಿಲೀಸ್ ಡೇಟ್ ಮುಂದಕ್ಕೆ ಹಾಕುತ್ತಾರಾ ನೋಡಬೇಕು. ಈಗಾಗಲೇ ಸುದೀಪ್ ಸಿನಿಮಾಗಾಗಿ ಜನ ಕಾಯುತ್ತಿರುವುದರಿಂದ ಮತ್ತೆ ಅವರ ಸಿನಿಮಾ ಬಿಡುಗಡೆ ದಿನಾಂಕ ಬದಲಾಯಿಸಿದರೆ ಅಭಿಮಾನಿಗಳು ರೊಚ್ಚಿಗೇಳುವುದು ಖಂಡಿತಾ. ಅತ್ತ ಉಪೇಂದ್ರ ಅಭಿಮಾನಿಗಳೂ ಅವರದೇ ನಿರ್ದೇಶನದಲ್ಲಿ ಮೂಡಿಬರುವ ಚಿತ್ರಕ್ಕಾಗಿ ಕಾಯುತ್ತಿದ್ದರು. ಬಹಳ ವರ್ಷಗಳ ನಂತರ ಅಭಿಮಾನಿಗಳ ಬಯಕೆ ಈಡೇರುತ್ತಿದೆ. ಹೀಗಾಗಿ ಈಗ ಇಬ್ಬರು ಗೆಳೆಯರು ಬಾಕ್ಸ್ ಆಫೀಸ್ ನಲ್ಲಿ ಗುದ್ದಾಟ ನಡೆಸಲಿದ್ದಾರೆ.