ಕಿಚ್ಚ ಸುದೀಪ್ ಹೊಸ ಸಿನಿಮಾ ಟೀಸರ್ ಅಪ್ ಡೇಟ್ ಇಂದು

ಮಂಗಳವಾರ, 27 ಜೂನ್ 2023 (08:40 IST)
Photo Courtesy: Twitter

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ಇಂದು ಟೀಸರ್ ಲಾಂಚ್ ಡೇಟ್ ಬಗ್ಗೆ ಅಪ್ ಡೇಟ್ ಸಿಗಲಿದೆ.

ಸುದೀಪ್ ಅವರ ಮುಂದಿನ ಸಿನಿಮಾ ಕಬಾಲಿ ನಿರ್ಮಾಪಕರ ಜೊತೆ ಎನ್ನುವುದು ಈಗಾಗಲೇ ಗೊತ್ತಾಗಿದೆ. ಈ ಮೂಲಕ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಸುದೀಪ್ ಅಭಿನಯಿಸುವುದು ಪಕ್ಕಾ ಆಗಿದೆ.

ಇದೀಗ ಕಿಚ್ಚ 46 ಸಿನಿಮಾದ ಟೀಸರ್ ಯಾವಾಗ ರಿಲೀಸ್ ಆಗಲಿದೆ ಎಂದು ಇಂದು ಬಹಿರಂಗವಾಗಲಿದೆ. ಸಾಮಾನ್ಯವಾಗಿ ಎಲ್ಲಾ ಸಿನಿಮಾಗಳು ಮೊದಲು ಟೈಟಲ್, ಫಸ್ಟ್ ಲುಕ್ ರಿಲೀಸ್ ಮಾಡುತ್ತವೆ. ಆದರೆ ಕಿಚ್ಚ46 ಸಿನಿಮಾ ತಂಡ ನೇರವಾಗಿ ಟೀಸರ್ ಮೂಲಕ ರಂಗಪ್ರವೇಶ ಮಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ