ಕಿಚ್ಚ ಸುದೀಪ್ ಹೊಸ ಸಿನಿಮಾ ಲಾಂಚ್ ಗೆ ಮುಹೂರ್ತ ಫಿಕ್ಸ್

ಭಾನುವಾರ, 30 ಏಪ್ರಿಲ್ 2023 (07:40 IST)
ಬೆಂಗಳೂರು: ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಸ್ವತಃ ಸುದೀಪ್ ಅಪ್ ಡೇಟ್ ಕೊಟ್ಟಿದ್ದಾರೆ. ಕಿಚ್ಚ46 ಲಾಂಚ್ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಮೇ ಕೊನೆಯ ವಾರದಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ. ಜೂನ್ 1 ರಂದು ಸಿನಿಮಾ ಲಾಂಚ್ ಆಗಲಿದೆ ಎಂದು ಸುದೀಪ್ ಟ್ವಿಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಮೇ 22 ರಿಂದ ಚಿತ್ರ ಶುರುವಾಗಲಿದೆ. ಜೂನ್ 1 ರಂದು ಲಾಂಚ್ ಕಾರ್ಯಕ್ರಮ ನಡೆಯುವುದು. ಈ ಸಿನಿಮಾ ಕತೆ ಬಗ್ಗೆ ನನಗೆ ಅತ್ಯಂತ ಕಾತುರವಿದೆ ಮತ್ತು ನಾನು ಈ ಪಾತ್ರ ಮಾಡುವುದನ್ನು ಎದಿರು ನೋಡುತ್ತಿದ್ದೇನೆ’ ಎಂದು ಸುದೀಪ್ ಹೇಳಿದ್ದಾರೆ. ಆದರೆ ಕಿಚ್ಚ ಸದ್ಯಕ್ಕೆ ಮೂರು ಸಿನಿಮಾಗಳ ಕತೆ ಓಕೆ ಮಾಡಿದ್ದು, ಆ ಪೈಕಿ ಯಾವ ಸಿನಿಮಾ ಎಂಬ ಪ್ರಶ್ನೆಗೆ ಜೂನ್ 1 ರಂದು ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ