ರಾಘವೇಂದ್ರ ಸ್ಟೋರ್ಸ್ ಸಿನಿಮಾ ಹೇಗಿದೆ?
ಮೊದಲಾರ್ಧದಲ್ಲಿ ಹಾಸ್ಯ, ದ್ವಿತೀಯಾರ್ಧದಲ್ಲಿ ಸೆಂಟಿಮೆಂಟ್. ಒಟ್ಟಾರೆ ಸಿನಿಮಾದಲ್ಲಿ ಹಯವದನನಾಗಿ ಜಗ್ಗೇಶ್ ಪೂರ್ತಿ ಆವರಿಸಿಕೊಂಡಿದ್ದಾರೆ.
ಬಹಳ ದಿನಗಳ ನಂತರ ಜಗ್ಗೇಶ್ ಫ್ಲೇವರ್ ನ ಸಿನಿಮಾವೊಂದನ್ನು ನೋಡಿದ ಅನುಭವ ಪ್ರೇಕ್ಷಕರಿಗೆ ನೀಡುತ್ತದೆ. ಕೆಲವೊಂದು ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಸಿನಿಮಾ ಇನ್ನಷ್ಟು ಚೆನ್ನಾಗಿರುತ್ತಿತ್ತು. ಫಸ್ಟ್ ನೈಟ್ ನದ್ದೇ ಚರ್ಚೆ ಕೊಂಚ ಅತಿ ಎನಿಸಬಹುದು. ಆದರೆ ಜಗ್ಗೇಶ್ ಜೊತೆಗೆ ದತ್ತಣ್ಣ ಕಾಂಬಿನೇಷನ್ ಇದ್ದರೆ ಪ್ರೇಕ್ಷಕರು ಇಷ್ಟಪಡದೇ ಇರುತ್ತಾರೆಯೇ? ಜೊತೆಗೆ ಅಜನೀಶ್ ಬಿ ಲೋಕನಾಥ್ ಹಿನ್ನಲೆ ಸಂಗೀತ ಸಾಥ್ ನೀಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸರಾಸರಿ 5 ಕ್ಕೆ 3.5 ಅಂಕ ನೀಡಿದ್ದಾರೆ.