ಕಪಿಲ್ ಶರ್ಮಾ ಶೋನಲ್ಲಿ ಕಿಚ್ಚ ಸುದೀಪ್

ಸೋಮವಾರ, 4 ಫೆಬ್ರವರಿ 2019 (09:52 IST)
ಮುಂಬೈ: ಸೋನಿ ಟಿವಿಯಲ್ಲಿ ಪ್ರಸಾರವಾಗುವ ಫೇಮಸ್ ಶೋ ಕಪಿಲ್ ಶರ್ಮಾ ಶೋನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ. ಈ ಬಗ್ಗೆ ಸ್ವತಃ ಸುದೀಪ್ ತಮ್ಮ ಟ್ವೀಟ್ ಮುಖಾಂತರ ತಿಳಿಸಿದ್ದಾರೆ.


ಕಪಿಲ್ ಶರ್ಮಾ ಶೋನಲ್ಲಿ ಬಾಲಿವುಡ್ ನ ಖ್ಯಾತ ನಟರು, ಕ್ರೀಡಾಳುಗಳು ಭಾಗವಹಿಸುತ್ತಾರೆ. ಇದೀಗ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ. ಸುದೀಪ್ ಈಗಾಗಲೇ ಕನ್ನಡ ಮಾತ್ರವಲ್ಲದೆ, ಬಾಲಿವುಡ್, ತೆಲುಗು, ತಮಿಳು ಸಿನಿಮಾದಲ್ಲೂ ಅಭಿನಯಿಸಿ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ.

ಇದೀಗ ಶೋನಲ್ಲಿ ಭಾಗವಹಿಸಿರುವ ಬಗ್ಗೆ ಮಾಹಿತಿ ‘ಕಪಿಲ್ ಶರ್ಮಾ ಶೋನಲ್ಲಿ ಗ್ರೇಟ್ ಟೈಮ್ ಕಳೆದೆ. ನಗೆಗೆ ಮಿತಿಯೇ ಇರಲಿಲ್ಲ ಮತ್ತು ಈ ರೀತಿ ನಕ್ಕಿದ್ದು ತುಂಬಾ ವಿರಳ. ಈ ರೀತಿ ಒಂದು ಅದ್ಭುತ ಕ್ಷಣ ಕಳೆಯಲು ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದು ಸುದೀಪ್ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ