ಆನ್ ಲೈನ್ ಬುಕಿಂಗ್ ಶುರುವಾದ ಗಳಿಗೆಯಲ್ಲೇ ದಾಖಲೆ ಮಾಡಿದ ನಟಸಾರ್ವಭೌಮ

ಶನಿವಾರ, 2 ಫೆಬ್ರವರಿ 2019 (10:53 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾವೊಂದು ಬರೋಬ್ಬರಿ ಒಂದು ವರ್ಷದ ಬಳಿಕ ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಅಭಿಮಾನಿಗಳು ನಟಸಾರ್ವಭೌಮ ಸಿನಿಮಾದ ಮೇಲೆ ಕ್ರೇಜ್ ಇಟ್ಟುಕೊಂಡಿದ್ದಾರೆ.


ಫೆಬ್ರವರಿ 7 ರಿಂದ ಥಿಯೇಟರ್ ನಲ್ಲಿ ನಟಸಾರ್ವಭೌಮನ ನರ್ತನ ಶುರುವಾಗಲಿದೆ. ಇದೀಗ ಆನ್ ಲೈನ್ ಟಿಕೆಟ್ ಬುಕಿಂಗ್ ಶುರುವಾಗಿದೆ. ಟಿಕೆಟ್ ಬುಕಿಂಗ್ ಶುರುವಾದ ಗಂಟೆಗಳಲ್ಲೇ ಮೊದಲ ಶೋ ಟಿಕೆಟ್ ಗಳು ಸೋಲ್ಡ್ ಔಟ್ ಆಗಿ ದಾಖಲೆ ಮಾಡಿದೆ.

ಇನ್ನು, ಅಪ್ಪು ಅಭಿಮಾನಿಗಳು ಥಿಯೇಟರ್ ಗೆ ವಿಶೇಷ ಅಲಂಕಾರ ಮಾಡಿ ನಟಸಾರ್ವಭೌಮನ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಥಿಯೇಟರ್ ಗಳಲ್ಲಿ ಚಿತ್ರದ ಟಿಕೆಟ್ ಗಳು ಮಾರಾಟವಾಗಿದೆ ಎಂಬ ಸುದ್ದಿ ಬಂದಿದೆ. ಹೀಗಾಗಿ ಅಪ್ಪು ಸಿನಿಮಾ ಹಿಟ್ ಆಗುವುದು ಖಚಿತ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ