ಪಾತ್ರವರ್ಗದಲ್ಲಿ ಚಿಕ್ಕಣ್ಣ, ರವಿಶಂಕರ್ ಸಹ ಇದ್ದು ಆಕ್ಷನ್ ಜೊತೆಗೆ ಮನರಂಜನೆಯನ್ನೂ ನಿರೀಕ್ಷಿಸಬಹುದು. ಎಸ್‍ವಿಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಬ್ಬುಲಿ ಚಿತ್ರವನ್ನು ರಘುನಾಥ್ ನಿರ್ಮಿಸುತ್ತಿದ್ದಾರೆ. ನಿರ್ದೇಶಕರಾಗಿ ಬದಲಾಗಿರುವ ಛಾಯಾಗ್ರಾಹಕ ಎಸ್ ಕೃಷ್ಣ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು.
ಕಥೆ, ಚಿತ್ರಕಥೆ ಜವಾಬ್ದಾರಿಯನ್ನೂ ಸಹ ಕೃಷ್ಣ ಹೊತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಕರುಣಾಕರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೆ ಹೆಬ್ಬುಲಿ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಸ್ಯಾಂಡಲ್‍ವುಡ್‍ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿವೆ. ಆಡಿಯೋ ಹಕ್ಕುಗಳನ್ನು ಜೀ ಮ್ಯೂಸಿಕ್ ಪಡೆದಿದೆ.